ಪೋಷಣ್ ಅಭಿಯಾನ ಯೋಜನೆ – ಶಿರಸಿ ತಾಲ್ಲೂಕು ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ

ಪೋಷಣ್ ಅಭಿಯಾನ ಯೋಜನೆ – ಶಿರಸಿ ತಾಲ್ಲೂಕು ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ

[social_buttons]

ಶಿರಸಿ, ಉತ್ತರ ಕನ್ನಡ:
ಪೋಷಣ್ ಅಭಿಯಾನ ಯೋಜನೆಯಡಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಶಿರಸಿ ಯಲ್ಲಿ ಖಾಲಿ ಇರುವ Block Co-ordinator (ತಾಲ್ಲೂಕು ಸಂಯೋಜಕರು) ಹುದ್ದೆಯನ್ನು ನೇರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


1) ಹುದ್ದೆಯ ವಿವರಗಳು

ಕಚೇರಿಯ ವಿವರಹುದ್ದೆಹುದ್ದೆಗಳ ಸಂಖ್ಯೆಮಾಸಿಕ ಸಂಭಾವನೆ
ಶಿಶು ಅಭಿವೃದ್ಧಿ ಯೋಜನಾ ಕಛೇರಿ, ಶಿರಸಿBlock Co-ordinator01₹20,000/-

2) ವೇಳಾಪಟ್ಟಿ

  • ಪ್ರಕಟಣೆ ದಿನಾಂಕ: 12-09-2025
  • ಅರ್ಜಿ ನಮೂನೆ ಪಡೆಯುವ ಅವಧಿ: 12-09-2025 ರಿಂದ 13-10-2025ರವರೆಗೆ
  • ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ: 13-10-2025 ಸಂಜೆ 5.00 ಗಂಟೆ
  • ಅರ್ಜಿಯನ್ನು ಪಡೆಯುವ ಮತ್ತು ಸಲ್ಲಿಸುವ ಸ್ಥಳ:
    ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರವಾರ – 581343
  • ಸಂಪರ್ಕ:
    📞 08382-226761 / 226142
    ✉️ ddwcdkarwar761@gmail.com

ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳ ವಿವರ :-

  1. ಭರ್ತಿ ಮಾಡಿರುವ ನಿಗದಿತ ಅರ್ಜಿ ನಮೂನೆ.
  2. ಎಸ್.ಎಸ್.ಎಲ್.ಸಿ ಅಂಕಪಟ್ಟಿ ಪ್ರತಿ.
  3. ನಿಗದಿಪಡಿಸಿರುವ ವಿದ್ಯಾರ್ಹತೆಯ ಅಂಕಪಟ್ಟಿಗಳ ಪ್ರತಿಗಳು.
  4. ನಿಗದಿಪಡಿಸಿರುವ ಅನುಭವ ಪ್ರಮಾಣ ಪತ್ರಗಳ ಪ್ರತಿಗಳು.
  5. ಕಂಪ್ಯೂಟರ್ ತರಬೇತಿ ಪಡೆದಿರುವ ಬಗ್ಗೆ ಪ್ರಮಾಣ ಪತ್ರದ ಪ್ರತಿ.
  6. ಆಧಾರ್ ಕಾರ್ಡ್ ಪ್ರತಿ

ಷರತ್ತು ಮತ್ತು ನಿಬಂಧನೆಗಳು :-

  1. ನೇರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತಿರುವ ಸದರಿ ಹುದ್ದೆಯು ತಾತ್ಕಾಲಿವಾಗಿದ್ದು, ಯೋಜನೆ ಜಾರಿಯಲ್ಲಿರುವವರೆಗೆ ಮಾತ್ರ ಪಡೆದುಕೊಳ್ಳಲಾಗುತ್ತಿದೆ.
  2. ಅಭ್ಯರ್ಥಿಯ ವಯಸ್ಸು 21 ವರ್ಷ ರಿಂದ 40 ವರ್ಷ ವಯೋಮಿತಿಯೊಳಗಿರಬೇಕು ಮತ್ತು ಆರೋಗ್ಯವಂತರಾಗಿರಬೇಕು.
  3. ಅರ್ಹ ಸ್ಥಳೀಯ(ಅದೇ ತಾಲ್ಲೂಕಿನ) ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಸ್ಥಳೀಯ ಅಭ್ಯರ್ಥಿಗಳು ಇಲ್ಲದಿದ್ದ ಪಕ್ಷದಲ್ಲಿ ಮಾತ್ರ ಆಯ್ಕೆ ಸಮಿತಿಯ ತೀರ್ಮಾನದಂತೆಇತರೆ ಸ್ಥಳಗಳ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗುವುದು.
  4. ಅಭ್ಯರ್ಥಿಗಳು ನಿಗದಿಪಡಿಸಿರುವ ವಿದ್ಯಾರ್ಹತೆ, ಅನುಭವ, ಕಂಪ್ಯೂಟರ್ ಜ್ಞಾನ ಹೊಂದಿರುವುದು ಮತ್ತು ಇತರೆ ಷರತ್ತುಗಳನ್ನು ಪೂರೈಸಿರುವುದು ಅವಶ್ಯವಾಗಿರುತ್ತದೆ.
  5. ಸದರಿ ನೇಮಕಾತಿಯು 11 ತಿಂಗಳ ಅವಧಿಯಾಗಿದ್ದು, ಕೆಲಸ ನಿರ್ವಹಣೆಯ ಆಧಾರದ ಮೇಲೆ ಮುಂದುವರೆಸಲಾಗುತ್ತದೆ.
  6. ಕಾಲಕಾಲಕ್ಕೆ ಸರ್ಕಾರದಿಂದ ಮತ್ತು ಕೇಂದ್ರ ಕಛೇರಿಯಿಂದ ಮತ್ತು ಈ ಕಚೇರಿಯಿಂದ ಹೊರಡಿಸುವ ನಿಬಂಧನೆಗಳು ಮತ್ತು ಷರತ್ತುಗಳಿಗೆ ಬದ್ಧರಾಗಿರಬೇಕು.
  7. ಆಯ್ಕೆಗೆ ಶೇಖಡಾ 70% ರಷ್ಟು ಪದವಿ ಅಂಕ 20% NIC ನಡೆಸುವ ಕಂಪ್ಯೂಟರ್ ಪರೀಕ್ಷೆ, 10% ಸಂದರ್ಶನ ಅಂಕ ನಿಗದಿ ಪಡಿಸಿದ್ದು ಇವುಗಳ ಆಧಾರದ ಮೇಲೆ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು
  8. ಅಭ್ಯರ್ಥಿಯು ನಿಗದಿಪಡಿಸಿರುವ Scope of work ಪ್ರಕಾರ ಕರ್ತವ್ಯ ನಿರ್ವಹಿಸಲು ಸಿದ್ಧರಿರಬೇಕು.
  9. ಆಯ್ಕೆ ಸಮಿತಿಯ ನಿರ್ಣಯದಂತೆ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕ್ರಮವಹಿಸಲಾಗುವುದು.
  10. ಅಭ್ಯರ್ಥಿಯ ಆಯ್ಕೆ ಕುರಿತಂತೆ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

“ಇಂದಿನ ಪ್ರಮುಖ ಸರ್ಕಾರಿ ಯೋಜನೆಗಳು + ಉದ್ಯೋಗ ಸುದ್ದಿ + ಕ್ರೀಡೆ + ಸಿನಿಮಾ – ಮೊದಲು ತಿಳಿಯಿರಿ!”[social_buttons]


Leave a Comment

Comments

No comments yet. Why don’t you start the discussion?

    Leave a Reply