ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-19

ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-19

ದೀಪದ ಕೆಳಗೆ ಕತ್ತಲು

ಒಂದು ದಿನ ಅಕಬರ-ಬೀರಬಲ್ಲರು ಸಂಜೆಗೆ ಉಕ್ಕಡದ ಕೋಟೆಯ ಮೇಲೆ ನಿಂತು ಸೃಷ್ಟಿ ಸೌಂದರ್ಯವನ್ನ ವೀಕ್ಷಿಸುತ್ತಿದ್ದರು. ಆಗ ದೂರದಲ್ಲಿ ಯಾರೋ ನಾಲ್ವರು ಜನರು ಗುದ್ದಾಡುತ್ತಿರುವದು ಕಂಡು ಬಂದಿತು. “ಬೀರಬಲ್ಲ, ಅದೇನದು, ದೂರದಲ್ಲಿ ನಡೆದಿದ್ದು ನೋಡು” ಎಂದನು ಬಾದಶಹನು. ಅಷ್ಟರಲ್ಲಿ ಒಬ್ಬನನ್ನು ಬಿಟ್ಟು ಉಳಿದವರೆಲ್ಲರೂ ಓಡಿಹೋದರು. ಆ ಒಬ್ಬನು ಆಳುತ್ತ ಕೋಟೆಯತ್ತ ಬರತೊಡಗಿದನು. ಅಕಬರ-ಬೀರಬಲ್ಲರಿಬ್ಬರೂ ಕೆಳಗಿಳಿದು ಬಂದು ಆ ವ್ಯಕ್ತಿಯನ್ನು ಕರೆದು ಕೇಳಿದರು. “ಯಾರೀ ನಾಲವರು ಟೊಣಪರು ನನ್ನನ್ನು ಸುಲಿದು ‘ಹೇರಳ ಹಣವನ್ನು ಹೊತ್ತುಕೊಂಡು ಹೋದರು” ಎಂದು ರೋಧಿಸಿದನು.

ಅಕಬರನು ಅವನನ್ನು ಸಮಾಧಾನಪಡಿಸಿ ಅವರ ಶೋಧ ನಡೆಸುವೆನೆಂದು ಭರವಸೆ ಕೊಟ್ಟನು.
ಇದರ ಶೋಧ ನಡೆಯಿತು. ಆಸ್ಥಾನದ ಕೆಲವು ಸರದಾರರೇ ಸಂಚು ಹಾಕಿ ನೆರೆಹೊರೆಯಿಂದ ಬಂದವರ ಸುಲಿಗೆ ನಡೆಸುವ ಕಾರ್ಯದಲ್ಲಿ ಮಗ್ನರಾದುದು ಕಂಡು ಬಂದಿತು.

“ಬೀರಬಲ್ಲ, ಏನಿದು ಅನ್ಯಾಯ? ನನ್ನವರೆಂಬುವವರು, ರಾಜ್ಯಸೂತ್ರಗಳನ್ನು ಕೈಯ್ಯಲ್ಲಿ ಹಿಡಿದುಕೊಂಡವರೇ ಹೀಗೆ ನಡೆದರೆ ಹೇಗೆ? ನನ್ನ ಸನ್ನಿಧಾನದಲ್ಲಿ, ರಾಜಧಾನಿಯಲ್ಲಿ, ನಡುಹಗಲಿನಲ್ಲಿ ದಿನಾಲು ಇಂಥ ಕೃತ್ಯಗಳಾಗುವವೆಂಬುದು ಸಹ ನನಗೆ ಗೊತ್ತಿರಲಿಲ್ಲವಲ್ಲ? ಇದಕ್ಕೇನು ಮಾಡಬೇಕು?”

“ಮಹಾಪ್ರಭೋ ಇದು ಅನಿವಾರ್ಯದ ಪ್ರಸಂಗ, ಇದನ್ನು ತಪ್ಪಿಸಲು ಸಾಧ್ಯವಿಲ್ಲ, ಬಾಯಿ ಮುಚ್ಚಿಕೊಂಡು ಸುಮ್ಮನಿರಲೇಬೇಕು. ಜಗತ್ತು ಹುಟ್ಟಿದಾಗಿನಿಂದ ಇಂಥ ಕೃತ್ಯಗಳು ನಡೆದೇ ಇವೆ. ನಡೆಯುತ್ತಲೂ ಹೋಗುವವು, ಉಪಾಯವಿಲ್ಲ. ದೀಪವು ಬೇಕಾದಷ್ಟು ದೊಡ್ಡದಿರಲಿ ಅದರ ಕೆಳಗೆ ಕತ್ತಲೇ ಇದ್ದೇ ತೀರಬೇಕು, ಇದು ಗಾದೆಯ ಮಾತು” ಎಂದನು.

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply