ಪಕ್ಷಪಾತ
ಮನುಷ್ಯನು ಎಷ್ಟೇ ದೊಡ್ಡವನಿದ್ದರೂ ಎಷ್ಟೇ ವಿಶಾಲ ಹೃದಯದವನಿದ್ದರೂ ಹೃದಯದ ಎಲ್ಲಿಯೋ ಒಂದು ಮೂಲೆಯಲ್ಲಿ ‘ತನ್ನದು’ ಎನ್ನುವ ಭಾವವೊಂದು ಇದ್ದೇ ಇರುವದು. ಅದು ಇಲ್ಲದಿದ್ದರೆ ಅವನು ಅಸಾಮಾನ್ಯನು; ಅತಿ ಮಾನವನು.
ಅಕಬರನು ಒಂದು ದಿನ ಫಾರ್ಸಿ ಭಾಷೆಯಲ್ಲಿಯ ಒಂದು ಗ್ರಂಥ ಓದುತ್ತಿ ರುವಾಗ ಏನೋ ನೆನಪಾಗಿ ಬೀರಬಲ್ಲನಿಗಂದನು. “ಬೀರಬಲ್ಲ ನಿಮ್ಮ ಸಂಸ್ಕೃತ ಭಾಷೆಯನ್ನು ನಿರ್ಮಿಸಿದವರು ಅಷ್ಟು ಜಾಣರೆಂದು, ನನಗೆ ತೋರುವುದಿಲ್ಲ.”
“ಅದೇಕೆ ಮಹಾಪ್ರಭೋ! ಅಂತಹ ನುಡಿಯು ಅರ್ಥಪೂರಿತವಾದ ರಸವತ್ತಾದ ಸಂಸ್ಕೃತ ಭಾಷೆ ಇನ್ನೊಂದಿಲ್ಲವೆಂದೂ, ದೇವತೆಗಳ ಭಾಷೆ ಇದೆಂದೂ ವದಂತಿ ລ໖.”
“ಇರಬಹುದು. ಆದರೆ ಇದು ನೋಡು, ನಾವು ಕಾಲುಗಳಿದ್ದರೆ ಓಡಾಡುವೆವು ಮಹಾತ್ಕಾರ್ಯಮಾಡುವೆವು. ‘ಕಾಲುಗಳೇ ಮನುಷ್ಯನಿಗೆ ಮುಖ್ಯ’ ಅಂಥದಕ್ಕೆ ನಿಮ್ಮಲ್ಲಿ ‘ಪಾದ” ಎಂದು ಕರೆದಿದ್ದಾರೆ. ಇದು ಯೋಗ್ಯವೇ?”
“ಖುದಾವಂದ ಹಾಗೆನ್ನಬಾರದು. ನಿಮ್ಮ ಫಾರ್ಸಿ ಭಾಷೆಯೇನು ಚೆನ್ನಾಗಿದೆ? ಅದರಲ್ಲಿ ಸಹಸ್ರ ದೋಷಗಳಿಗೆ. ಈಗ ಉದಾಹರಣಾರ್ಥವಾಗಿ ‘ಕೈ’ ಎಂಬ ಶಬ್ದವನ್ನೇ ತೆಗೆದುಕೊಳ್ಳೋಣ. ಕೈಯಿದ್ದರೆ ಊಟ ಮಾಡಿ ಬದುಕಬಹುದು. ಯುದ್ಧ ಮಾಡಿ ಜಯಿಸಬಹುದು. ಇನ್ನೂ ಅನೇಕ ಸತ್ಕಾರ್ಯಗಳು ಅದರಿಂದಾಗುವವು. ಅಂಥ ಕೈಗೆ ಫಾರ್ಸಿಯಲ್ಲಿ ‘ದಸ್ತ’ ಎಂದು ಅಂದುಬಿಟ್ಟಿದ್ದಾರೆ.” ಬಾದಶಹನು ಸುಮ್ಮನಾದನು.
“ಭಾಷೆಯಲ್ಲಿ ಏನಿದೆ ಖುದಾವಂದ, ಎಲ್ಲವೂ ಭಾವದಲ್ಲಿದೆ. ಮನದ ಭಾವವನ್ನು ಒಬ್ಬರಿಗೊಬ್ಬರು ತಿಳಿಸಿ ಹೇಳುವ ಸಾಧನೆ ಮಾತ್ರ ಭಾಷೆ. ಈ ರೀತಿ ಇದನ್ನು ಉಪಯೋಗಿಸಬೇಕು. ಸುಮ್ಮನೇ ಅಭಿಮಾನಪಟ್ಟು ಪ್ರಯೋಜನವಿಲ್ಲ.”
“ಹೌದು ಬೀರಬಲ್ಲ ಇಂದು ನಿನ್ನಿಂದ ಈ ಜ್ಞಾನ ದೊರಕಿಸಿದೆನು
ಮುಂದಿನ ಭಾಗ ಓದಿ…