ನದಿಯ ರೋಧನ
ಬೇಸಿಗೆಯ ಕಾಲ, ರಾತ್ರಿ ಎಷ್ಟು ಹೊತ್ತಾದರೂ ತಂಪು ಗಾಳಿಯ ಸುಳಿವೇ ಇಲ್ಲ. ಮಹಾರಾಜ ಅಕಬರನಿಗೆ ಬೇಸಿಗೆಯೆಂದರೆ ಒಂದು ಮಹಾಸಂಕಟದ ಕಾಲವು ಅದನ್ನು ಕಳೆಯುವದು ದುರ್ದೆಶೆ, ರಾತ್ರಿ ಹನ್ನೆರಡು ಗಂಟೆಯಾದರೂ ಅರಮನೆಯ ಮೇಲುಪ್ಪರಿಗೆಯಲ್ಲಿ ಬೀರಬಲ್ಲನ ಕೂಡ ಹರಟೆ ಹೊಡೆಯುತ್ತಲೇ ಇದ್ದನು.
ಆಗ ಒಮ್ಮಿಂದೊಮ್ಮೆಲೇ ಏನೋ ಭಯಂಕರವಾದ ಆರ್ಭಟದ ಸಪ್ಪಳ ಕೇಳಿತು. ಈರ್ವರೂ ಧಾವಿಸಿ ಬಂದು ನೋಡಿದರು. ಯಮುನಾ ನದಿಗೆ ಹಿಮಾಲಯದಲ್ಲಿಯ ಹಿಮವೆಲ್ಲ ಕರಗಿ ಒಮ್ಮೆಲ್ಲೇ ಮಹಾಪೂರ ಬಂದುಬಿಟ್ಟಿದೆ.. ಅಕಬರನಿಗೆ ಕವಿಸಮಯ ಬಂದುಬಿಟ್ಟಿತು.
“ನೋಡು ಬೀರಬಲ್ಲ, ಯಮುನೆಯು ಎಕೆ ಆಳುತ್ತಿರುವಳು ಹೇಳು.”
“ಕೇಳುವದೇನು ಮಹಾಪ್ರಭೋ! ಅವಳು ಅತ್ತರೆ ನಿಮಗೇಕೆ ಇಷ್ಟು ಆಶ್ಚರ್ಯ.’”
“ಹುಚ್ಚಾ! ಯಮುನೆ ಅಂದರೆ ಹೆಂಗಸೆಂದು ನಾನು ಹೇಳಲಿಲ್ಲ. ಈ ಯಮುನಾ ನದಿ ಏಕೆ ಆಳುವದು? ನದಿ ಆಳುವದು ಅಚ್ಚರಿಯಲ್ಲವೇ?”
“ಅಲ್ಲ, ಈ ಯಮುನೆಯು ಪತಿಗ್ರಹ ಪ್ರವೇಶಕ್ಕಾಗಿ ಸಾಗಿದ್ದಾಳೆ. ಪಾಪ! ಹೆಣ್ಣು ಮಗಳು ತಾಯಿಯನ್ನಗಲಬೇಕಾಗಿ ಬಂದುದರಿಂದ ಆಳುತ್ತಿದ್ದಾಳೆ.”
“ಗಂಡನ ಮನೆ? ಏನು ಹಾಗಂದರೆ?”
“ಮಹಾಪ್ರಭೋ, ಯಮುನೆಗೆ ಹಿಮಾಲಯವು ತಾಯಿಯು ಅಲ್ಲಿಂದ ಹೊರಟು ಈಗಿಂದೀಗಲೇ ಸಮುದ್ರನಾಥನಲ್ಲಿ ತೆರಳಿದ್ದಾಳೆ. ಅದಕ್ಕಾಗಿಯೇ ಈ ರೋಧನ.”
ಒಹೋ ಹೀಗೂ ತಿಳಿಯಿತು.
ಮುಂದಿನ ಭಾಗ ಓದಿ…