ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-4

ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-4

4. ಬ್ರಾಹ್ಮಣ ಹುಡುಗಿಯು ಮಾಂಸವನ್ನು ತಿಂದಳು

ಅಕಬರನ ಆ ಸ್ಥಾನ ನಡೆದಿದೆ. ವಂದಿಮಾಗಧರ ಜಯ ಜಯಕಾರಗಳಾದವು. ಮುಲ್ಲಾ ಹಯಾಜಿಗಳ, ಆಚಾರ್ಯ, ಭಟ್ಟರುಗಳ ಆಶೀರ್ವಾದಗಳು ಮುಗಿದವು. ಸೇನಾಪತಿ ಮಂತ್ರಿಗಳ ಕುಶಲ ಪ್ರಶ್ನೆಗಳಾದವು. ಪಂಡಿತರ ಕವಿಗಳ ಗಾಯಕರ ನರ್ತಕಿಯರ ಎಲ್ಲ ಸೇವೆ ಸಂಭಾವನೆಗಳೂ ಮುಗಿದವು.

ಓರ್ವ ಸೇವಕನು ಬಂದು ಕುರ್ನಿಸಾತು ಮಾಡು “ಜೀಯಾ ಹೊರಗೆ ಓರ್ವ ಯುವತಿಯನ್ನು ಒಬ್ಬ ರಾಜಸೇವಕನು ಕರೆ ತಂದಿದ್ದಾನೆ” ಎಂದನು.
ಒಳಗೆ ಬರಲಿ.'” ಸೇವಕ-ಯುವತಿಯರು ಬಂದರು. ಸೇವಕನು ಸೀರೆಯ ಹರಕು ಬಟ್ಟೆಯಲ್ಲಿಯ ಮಾಂಸದ ತುಣುಕುಗಳನ್ನು ಬಿಚ್ಚಿ ರಾಜನ ಮಂದಿಡುತ್ತ

“ಖಾವಂದ ಇವಳು ಬ್ರಾಹ್ಮಣ ಜಾತಿಯ ಹೆಂಗಸು. ಮಾಂಸವನ್ನು ತಿಂದಿದ್ದಾಳೆ. ತಿಂದು ಉಳಿದದ್ದನ್ನು ಇದರಲ್ಲಿ ಕಟ್ಟಿಟ್ಟಿದ್ದಾಳೆ. ನಾನು ಶೋಧಿಸಿ ತಂದಿದ್ದೇನೆ ನೋಡಿರಿ. ಧರ್ಮ ಸಿಂಹಾಸನದಲ್ಲಿದ್ದ ತಾವು ಇದರ ನಿರ್ಣಯ ಕೊಡಬೇಕು. ಬ್ರಾಹ್ಮಣರು ಮಾಂಸ ತಿನ್ನಬಾರದೆಂದು ಅವರ ಧರ್ಮದಲ್ಲಿ ಹೇಳಿದೆ…”

ಬಾದಶಹನು ಆ ಮಾಂಸದ ತುಣುಕುಗಳನ್ನೋ, ತಲೆ ತಗ್ಗಿಸಿಕೊಂಡು ನಮ್ರಭಾವದಿಂದ ನಿಂತ ಆ ಸುಂದರಿಯನ್ನೂ ನೋಡುತ್ತ “ತಂಗೀ ಇದು ನಿಜವೇ?” ಎಂದನು.

“ಇಲ್ಲ ಸರಕಾರ ಇದೆಲ್ಲ ಸುಳ್ಳು.”

“ಮತ್ತೇನು?”

“ಈ ಮೊದಲು ನಿಮ್ಮ ಸೇವಕನು ನನ್ನನ್ನು ನೋಡಿ ಮೋಹಿತನಾಗಿ ನನ್ನನ್ನು ಮುಟ್ಟಲು ಬಂದನು. ಅವನನ್ನು ಗದ್ಗರಿಸಿ ಓಡಿಸಿದೆ. ಕೂಡಲೇ (ನನ್ನನ್ನು ನಿಮ್ಮಲ್ಲಿಗೆ ಹಿಡಿದು ತಂದು) ಈ ಸೇವಕನನ್ನು ಕರೆತಂದು ತಮ್ಮಲ್ಲಿಗೆ ಎಳೆದು ತಂದಿದ್ದಾನೆ. ಮಾಂಸದ ಪ್ರಕರಣವೇ ನನಗೆ ಗೊತ್ತಿಲ್ಲ.”

ಬಾದಶಹನ ಕೆಂಪು ಕಣ್ಣುಗಳು ಮೊದಲಿನ ಸೇವಕನ ಮೇಲೆ ಬಿದ್ದವು. ಅವನು ನಡುಗುತ್ತ “ಇಲ್ಲ ಜೀಯಾ, ಇವಳು ತನಗೆ ಮಾಂಸ ತಿನ್ನುವ ಅಪೇಕ್ಷೆಯಾಗಿದೆ ಎಂದಳು. ಆದುದರಿಂದ ನಾನೇ ತಂದು ಕೊಟ್ಟೆನು. ಮುಟ್ಟಲು ಹೋದದ್ದು ಮೊದಲಾದ ಕಥೆಗಳು ಸುಳ್ಳು. ಇವಳಿಗೂ ನನಗೂ ಮೊದಲಿನಿಂದಲೂ ಸ್ನೇಹವಿದೆ. ದಿನಾಲು ನಡು ಹಗಲಿನಲ್ಲಿ ನೀರು ತರುವ ನೆವದಿಂದ ನದಿಗೆ ಬರುವಳು. ಅಲ್ಲಿ ನಾನು ಮಾಂಸದ ಅಡಿಗೆ ತಯಾರಿಸಿ ತರುತ್ತೇನೆ ಇಬ್ಬರೂ ತಿಂದು ತೇಗಿ ನೀರು ಕುಡಿದು ಹರಟೆ ಹೊಡೆಯುವವು.

ಬಾದಶಹನು ಇನ್ನೊಬ್ಬ ಸೇವಕನ ಕಡೆಗೆ ತಿರುಗಿ ನೋಡಿದನು.

“ಇವಳು ಮಾಂಸ ತಿಂದದ್ದು ನೀನು ನೋಡಿದೆಯಾ?”

“ತಿಂದದ್ದನ್ನು ನೋಡಲಿಲ್ಲ. ಉಳಿದದ್ದನ್ನು ಬಟ್ಟೆಯಲ್ಲಿ ಕಟ್ಟಿ ತೊಡಗಿದ್ದಳು. ಆಗ ನಾನು ಇವಳನ್ನು ಹಿಡಿದೆನು. ಕೂಡಲೇ ಇವನು ನನಗೆ ಪರಿಪರಿಯಿಂದ ಬೇಡಿಕೊಳ್ಳಲಾರಂಭಿಸಿದನು. ದಯವಿಟ್ಟು ಈ ಯುವತಿಯನ್ನು ಬಿಟ್ಟುಬಿಡಬೇಕೆಂದು ಕಾಲು ಬೀಳತೊಡಗಿದನು. ಆದರೆ ಕರ್ತವ್ಯಕ್ಕೆ ಕಟ್ಟು ಬಿದ್ದು ಅವನ ಪ್ರಾರ್ಥನೆಯನ್ನು ಎಷ್ಟೂ ಲೆಕ್ಕಿಸದೇ ಇವಳನ್ನು ಇಲ್ಲಿಗೆ ಕರೆ ತಂದೆನು.”

ಇದೊಂದು ದೊಡ್ಡ ಸಮಸ್ಯೆಯಾಗಿ ಬಿಟ್ಟಿತು. ಸಭಿಕರೆಲ್ಲರೂ ದಿಗೂಢರಾದರು, ಯಾರಿಗೂ ಏನೂ ತೋಚದಾಯಿತು. ಅಕಬರನು ಇದನ್ನು ಪೂರ್ಣಪರೀಕ್ಷಿಸುವ ಹೊರತು ನಿರ್ಣಯ ಕೊಡುವ ಸ್ವಭಾವದವನಾಗಿರಲಿಲ್ಲ. ಕೂಡಲೇ ಅವಳ ಗಂಡನನ್ನೂ ಉಳಿದ ಆಪ್ರೇಷ್ಟರನ್ನೂ ಕರೆಯಿಸಿದನು. ಅವರೆಲ್ಲರ ಸಾಕ್ಷಿಯಾಯಿತು. ಅವರೆಲ್ಲರೂ ಅವಳು ಮಹಾಸಾದ್ವಿ, ಮಹಾಪತಿವ್ರತೆಯೆಂದು ಅವಳನ್ನು ಹೊಗಳಿದರು. ಆ ಕಥೆಯು ಸುಳ್ಳಿರಬಹುದೆಂದು ಅಂದರು. ಆದರೂ ಇದನ್ನು ನಿರ್ಣಯಿಸುವ ಬಗೆ ಎಂತು?

ಎಲ್ಲ ನ್ಯಾಯಧೀಶರೂ, ಪಂಡಿತರೂ ತಲೆಬಾಗಿದರು. ಬೀರಬಲ್ಲನು ಮುಂದೆ ಬಂದನು. “ತಂಗೀ ನೀನು ಮನೆಯನ್ನು ಬಿಟ್ಟು ಹೊರಡುವಾಗ ಏನಾದರೂ ತಿಂದು ಹೊರಟಿರುವೆಯೋ?”

“ತಿಂದು ಹೊರಟೆನು, ನದಿಯಿಂದ ನೀರು ತರುವದು ಶ್ರಮದ ಕೆಲಸ ಅದಕ್ಕಾಗಿ ತುಸು ಹೆಸರಿಟ್ಟಿನ ಉಂಡಿ ತಿಂದು ನದಿಗೆ ಸಾಗಿದೆನು” ಎಂದಳು.

“ಜೀಯಾ ನನಗೆ ಒಂದು ತಾಸಿನ ಅವಧಿ ಕೊಡಿರಿ. ಸಮಸ್ಯೆಯನ್ನು ನಾನು ಪೂರ್ತಿಗೊಳಿಸುವೆನು” ಎಂದನು ಬೀರಬಲ್ಲ.

“ತಥಾಸ್ತು.”

ಬೀರಬಲ್ಲನು ನೇರವಾಗಿ ಪೇಟೆಗೆ ಬಂದು ವಾಂತಿಯಾಗುವ ತೀಕ್ಷ್ಮವಾದ ಒಂದು ಔಷಧವನ್ನು ಔಷಧದ ಅಂಗಡಿಯಲ್ಲಿ ಕೊಂಡು ತಂದು ಯುವತಿಗೆ ಕುಡಿಯಲು ಕೊಟ್ಟನು. ಮುಂದೆ ಐದೇ ನಿಮಿಷಗಳಲ್ಲಿ ಅವಳು ಕಾರಿಕೊಂಡಳು. ಅದು ಕೇವಲ ಹೆಸರಿಟ್ಟಿನ ರಾಡಿ ಇದ್ದಿತೇ ಹೊರತು ಮಾಂಸದ ಸುಳಿವೇ ಅದರಲ್ಲಿ ಕಾಣಲಿಲ್ಲ.

“ಜೀಯಾ, ಇವಳು ಕೇವಲ ಹೆಸರಿಟ್ಟು ತಿಂದಿದ್ದಾಳೆ. ಮಾಂಸ ಮುಟ್ಟಿಲ್ಲ. ಇದೆಲ್ಲ ತಮ್ಮ ಜಾತಿಯ ಸೇವಕರ ಕುತಂತ್ರವು” ಎಂದನು.

ಇದನ್ನು ಕಂಡು ಸಭೆಯೆಲ್ಲರೂ ಹರುಷದಲ್ಲಿ ತೇಲಾಡಿತು. ಬೀರಬಲ್ಲನ ಜಾಣತನ ಹೊಗಳಿತು. ಬಾದಶಹನ ತಾಳ್ಮೆ ಮತ್ತು ನ್ಯಾಯಕ್ಕಾಗಿ ಹಾತೊರೆಯುವ ಗುಣವನ್ನು ಕೊಂಡಾಡಿತು. ಬ್ರಾಹ್ಮಣ ಸಾಧಿಯನ್ನು ಅವಳ ಗಂಡನ ವಶಕ್ಕೆ ಒಪ್ಪಿಸಲಾಯಿತು. ಈರ್ವರು ಯುವಕರನ್ನು ತುರಂಗಕ್ಕೆ ಕಳಿಸಲಾಯಿತು. ಬೀರಬಲ್ಲನಿಗೆ ಬಹುಮಾನ ಸಭಾ ಮರ್ಯಾದೆ ಕೊಡಲಾಯಿತು.

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply