ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-2

ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-2

2. ಅರ್ಥ ವಿಪರ್ಯಾಸ

ಈಗಿನಂತೆ ಆಗಿನ ಕಾಲದ ಅರಸರು ಹೊರ ಹೊರಡುವಾಗ ವಾಹನದಲ್ಲಿ ಕುಳಿತು ಬಿಚ್ಚುಗತ್ತಿಯ ಪಹರೆಯೊಳಗೆ ಜೀವನದ ಅಂಜಿಕೆಯಿಂದ ನಡುಗುತ್ತ ಹೊರಬೀಳುತ್ತಿರಲಿಲ್ಲ. ವೇಷ ಬದಲಾಯಿಸಿ ಊರಲ್ಲಿ ತಿರುಗಾಡಿ ಜನರ ಪರಿಸ್ಥಿತಿ ಏನಿದೆಯೆಂಬುದನ್ನು ಸ್ವತಃ ಕಣ್ಣಿನಿಂದ ನೋಡುತ್ತಿದ್ದರು. ಏನಾದರೂ ತೊಂದರೆಗಳಿದ್ದರೆ ಕೂಡಲೇ ನಿವಾರಿಸುತ್ತಿದ್ದರು. ಒಮ್ಮೊಮ್ಮೆ ತಮ್ಮ ರಾಜಕೀಯ ಪೋಷಾಕದಲ್ಲಿದ್ದಾಗಲೂ ಬೀದಿಯಲ್ಲಿ ಸಾಮಾನ್ಯ ಜನರಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅವರಿಗೆ ಜೀವದ ಹೆದರಿಕೆ ಎಳ್ಳಷ್ಟೂ ಇರಲಿಲ್ಲ.

ಇರಲಿ, ಈ ರೀತಿ ಅಕಬರ ಬೀರಬಲ್ಲನು ಅಲೆದಾಡುತ್ತ ಊರೊಳಗಿನ ಒಂದು ಬೀದಿಯಲ್ಲಿ ಹೋಗುತ್ತಿದ್ದಾಗ ಒಂದು ಬೀದಿಯಲ್ಲಿ ಹೋಗುತ್ತಿದ್ದಾಗ ಒಂದು ನಾಯಿಯು ಕೆಂಜೋಳದಿಂದಲೋ ಅಥವಾ ರಾಗಿ ಸಜ್ಜೆಯಿಂದಲೋ ಮಾಡಿದಂಥ ರೊಟ್ಟಿಯನ್ನು ತಿನ್ನುತ್ತ ನಿಂತಿತ್ತು. ಅದನ್ನು ಕಂಡು ಅಕಬರನು ಬೀರಬಲ್ಲನಿಗೆ ವಿನೋದ ಮಾಡಲು ಇದು ತಕ್ಕ ಸಮಯವೆಂದರಿತು. “ಬೀರಬಲ್ಲ, ದೇಖೋ ಕಾಲಿಕೊ] ಕುತ್ತಾ ಖಾಹಾ ಹೈ” (ಬೀರಬಲ್ಲನೇ ನೋಡು ಕಾಳಿಯನ್ನು ನಾಯಿಯು ತಿನ್ನುತ್ತಿದೆ) ಎಂದನು.
ಬೀರಬಲ್ಲನ ತಾಯಿಯ ಹೆಸರು ‘ಕಾಳಿ’ ಈ ವಾಕ್ಯವನ್ನು ಕೇಳಿ ಬೀರಬಲ್ಲನಿಗೂ ತನ್ನ ಮಾತಾಭಿಮಾನದ ಬಗ್ಗೆ ಎಚ್ಚರವಾಗಿ ತುಸು ಕೆಡಕೆನಿಸಿತು. “ಉಸಕೆ ಲಿಯೆ ತೊ ನಹಿ ನ್ಯಾಮತ ಹೈ” (ಅದು ನ್ಯಾಮಗಳನ್ನು ಹಿಡಿದುಕೊಂಡಿರುತ್ತದೆ) ಎಂದನು.

ಅಕಬರನ ತಾಯಿಯ ಹೆಸರು “ನ್ಯಾಮತ” ಎಂದಿದೆ. ಬಾದಶಹನು ಕೂಡಲೇ ಸಿಟ್ಟಿಗೆದ್ದನು. “ಹಾ, ನಾಯಿಯು ನನ್ನ ತಾಯಿಯನ್ನು ಹಿಡಿದಿರುವದೆ?” ಅ “ಅಂದರೆ ಕಾಳೀ ದೇವಿಯನ್ನು ತಿನ್ನುವದೆಂದು ನೀನನ್ನುವದು ಉಚಿತವೇ?” ತಾನು ಮನದಲ್ಲಿ ನೆನೆದದ್ದು ಬೀರಬಲ್ಲನಿಗೆ ತಿಳಿದದ್ದು ಕಂಡು ಅಕಬರನಿಗೆ ತುಸು ನಾಚಿಕೆಯೆನಿಸಿ ಪಶ್ಚಾತ್ತಾಪಟ್ಟು “ಛೇ, ನಾನು ನಿನ್ನ ತಾಯಿಯ ಹೆಸರನ್ನು ಎತ್ತಲಿಲ್ಲ. ಕರಿ’ ರೊಟ್ಟಿಯನ್ನು ತಿನ್ನುವದು ನೋಡು” ಎಂದೆನು

“ಸರಿ ರೊಟ್ಟಿ ಕರಿದಾಗಲೀ, ಕೆಟ್ಟಿರಲಿ ಅದನ್ನು ತಿನ್ನುವದು ನಾಯಿಯ ನೈಸರ್ಗಿಕ ಗುಣ ಎಂದು ಅರ್ಥವೇ ಹೊರತು ರಾಜಮಾತೆಯ ಹೆಸರೇ ನಾನೆತ್ತಲಿಲ್ಲ” ಎಂದನು ಬೀರಬಲ್ಲ.ಅಕಬರನು ನಿರುತ್ತರನಾಗಿ “ಅಹಹಾ…..” ಎಂದನು. ಬೀರಬಲ್ಲನೂ “ಅಹಹಾ….” ಎಂದನು

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply