ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-7

ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-7

ಕತ್ತೆಯ ಹೊರ

ಬೇಗಂ ನೊಡಗೂಡಿ ಬಾದಶಹನು ತನ್ನ ವಿಹಾರೋದ್ಯಾನದಲ್ಲಿ ವಿಹಾರಕ್ಕೆಂದು ಹೋಗಿದ್ದನು. ಸತಿಯ ಸಂಗಡ ಸರಸ ಸಲ್ಲಾಪಗಳಾದವು. ವಿನೋದವಾಯಿತು. ಪರಸ್ಪರರ ಮೇಲೆ ಹೂಗಳ ಚಲ್ಲಾಟವೂ ಆಯಿತು. ಆಡಿದರು. ಓಡಿದರು. ದಣಿದರು. ಅಲ್ಲಿಯ ಗಿಡದ ಹಣ್ಣಗಳನ್ನು ತಿಂದರು. ನೀರು ಕುಡಿಯಲು ಅಲ್ಲಿಯ ಸರೋವರಕ್ಕೆ ಬಂದರು. ನೀರು ಕುಡಿದರು. ಬೇಗಂನಿಗೆ ಒಂದು ಆಸೆಯಾಯಿತು. ತಾನು ಪತಿಯ ಕೂಡ ಸರೋವರದಲ್ಲಿ ಜಲವಿಹಾರ ಮಾಡಬೇಕೆಂದು ಸರಿ, ಆದರೆ ಮೈಮೇಲಿನ ಬಟ್ಟೆಗಳನ್ನು ಕಾಯುವವರಾರು? ಮಂಗಗಳ ಕಾಟ ಬಹಳವಿದೆ. ಬಟ್ಟೆ ತೆಗೆದು ದಂಡೆಯ ಮೇಲಿಟ್ಟರೆ ಮಂಗಗಳು ಬಂದು ಅವುಗಳನ್ನು ಕಿತ್ತಿ ಹರಿದೇ ಒಗೆಯುವವು.

ವಿಹಾರೋದ್ಯಾನದಲ್ಲಿದ್ದಾಗ ಬಾದಶಹನ ಭೆಟ್ಟಿಗೆ ಯಾರನ್ನೂ ಬಿಡುತ್ತಿರಲಿಲ್ಲ. ಆಳುಕಾಳುಗಳೂ ಕೂಡ ಇಲ್ಲಿ ಇರಬಾರದೆಂದು ಅಪ್ಪಣೆಯಿತ್ತು. ಆದರೆ ಬೀರಬಲ್ಲನಿಗೆ ಈ ನಿಯಮಗಳ ಆತಂಕವಿಲ್ಲ. ಇದೇ ವೇಳೆಗೆ ಬೀರಬಲ್ಲನು ಬಂದನು. “ಬಾದಶಹಾ, ಅನ್ನದಾತಾ, ಎಲ್ಲಿರುವಿರಿ ನಾನು ಬಂದೆ” ಎಂದು
ಅವರಿಗೆ ತಾನು ಬರುತ್ತಿರುವ ಎಚ್ಚರಿಕೆ ಕೊಡುತ್ತ ಬಂದನು.

ಬೇಗನೆಂದಳು. “ಬಹಳ ಸಂತೋಷವಾಯಿತ ಬೀರಬಲ್ಲ ಬನ್ನಿರಿ, ನಾವು ವಿಹಾರಕ್ಕಾಗಿ ಸರೋವರದಲ್ಲಿ ಇಳಿಯುವೆವು. ನೀವು ನಮ್ಮ ಪೋಷಾಕು ಹಿಡಿದುಕೊಳ್ಳಿರಿ” ಎಂದಳು.

“ಆಗಲಿ ಮಹಾದಾಜ್ಞೆ ತನ್ನಿರಿ.

ಬಾದಶಹ-ಬೇಗಂರಿಬ್ಬರೂ ತಮ್ಮ ಪೋಷಾಕನ್ನೆಲ್ಲವನ್ನು ತೆಗೆದು ಬೀರಬಲ್ಲನ ಕೈಯ್ಯಲ್ಲಿತ್ತು ಸರೋವರದಲ್ಲಿಳಿದರು. ಬೀರಬಲ್ಲನು ಅವುಗಳೆಲ್ಲವನ್ನು ಹೊತ್ತು ಒಂದು ಕಡೆಗೆ ಮರೆಗೆ ಹೋಗಿ ಕುಳಿತನು.

ವಿಹಾರವಾದ ಬಳಿಕ ಬಾದಶಹ ಬೇಗಂರು ಬಂದರು. ಬೀರಬಲ್ಲನು ಪೋಷಾಕನ್ನು ಹೊತ್ತುಕೊಂಡು ನಿಂತಿದ್ದನ್ನು ಕಂಡು “ಏನು ಬೀರಬಲ್ಲ, ಒಂದು ಕತ್ತೆಯ ಒಜ್ಜೆಯನ್ನೇ ಹೊತ್ತಿರುವೆಯಲ್ಲ!”

“ಛೇ ಛೇ ಅಲ್ಲ ಮಹಾರಾಜ, ತಾವು ತಪ್ಪಿದಿರಿ. ನಾನು ಹೊತ್ತದ್ದು ಎರಡು ಕತ್ತೆಗಳದ್ದು.

“ಅಂದರೆ? ನಾವು ಕತ್ತೆಗಳೇನು?”

“ಹಾಗೆ ನಾನೇಕೆ ಅನ್ನಲಿ? ತಮ್ಮ ಪತಿಗಳು ಲೆಕ್ಕ ತಪ್ಪಿದರು. ಅದನ್ನು ಸರಿ ಮಾಡಿದೆ.'”

“ಇರಲಿ ಮೊದಲು ನಮ್ಮ ಪೋಷಾಕು ತಾ. ಒದ್ದೆ ಬಟ್ಟೆಯಲ್ಲಿ ನಡುಗು ಬರುತ್ತಿದೆ.”

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply