15.ಮಹರ್ಬಾನ
ಅಕಬರ ಬೀರಬಲ್ಲರು ಒಂದು ದಿನ ಮಾತನಾಡುತ್ತ ಕುಳಿತಿದ್ದರು. ಎಂದು ಹೇಳಿದರೆ ಇದೇನಪ್ಪಾ ತಲೆಹಿಡಿಯುವ ವಾಕ್ಯ! ಪ್ರತಿಯೊಂದು ಕಥೆಯ ಪ್ರಾರಂಭದಲ್ಲಿಯೂ ಈ ವಾಕ್ಯ ಇದ್ದೇ ಇದೆಯಲ್ಲ! ಎಂದು ಓದುಗರು ಮೂಗು ಎಳೆಯುವದಿಲ್ಲವಷ್ಟೇ? ಏಕೆಂದರೆ ಅವರ ಮಾತುಗಳೇ ಕಥೆಗಳಾಗಿವೆ ಎಂದ ಬಳಿಕ ಅವರು ಮಾತನಾಡುತ್ತಿರುವದು ಎಂದು ಹೇಳಲೇಬೇಕು. ನಾಂದಿಯಾದ ಮೇಲೆ ಸೂತ್ರಧಾರನು ಪ್ರವೇಶಿಸುತ್ತಾನೆ ಎಂದು ನಾಟಕಾರಂಭದಲ್ಲಿ ಹೇಳಿದರೆ ಅದು ಬೇಜಾರವೇ? ಇಲ್ಲ ನಾಂದೀ ಆಗಲೇಬೇಕು. ಸೂತ್ರಧಾರನು ಬಂದು ಹೋಗಲೇಬೇಕು. ಆಮೇಲೆ ನಾಟಕಾರಂಭ.
ಹೀಗೆಯೇ ಎಲ್ಲವು. ಇರಲಿ, ಒಂದುದಿನ ಅಕಬರ ಬೀರಬಲ್ಲರು ಮಾತಾಡುತ್ತ ಕುಳಿತಾಗ, ಹಾಂ, ಹಾಂ ನಗಬೇಡಿರಿ, ನಗುವದು ಮುಂದಿದೆ ಮಾತಿಗೆ ಮಾತು ಹೊರಟು ವಾನ ಎಂಬುದಾಗಲೀ (ಬೀರಬಲ್ಲನು ಬಂಗಾಲದಿ೦ದ ಬಂದವನಾದುದರಿಂದ ವಕಾರಕ್ಕೆ ಬಕಾರ ಸೇರಿಸುವ ರೂಢಿ ಅಲ್ಲಿ ಜನಕ್ಕಿದ್ದುದರಿಂದ) ಬಾನ ಎಂಬುದಾಗಲೀ ಯಾರ ಹೆಸರಿನ ಅಂತ್ಯದಲ್ಲಿ ಇರುವದೋ ಅವರೆಲ್ಲರೂ ಬಹುದೊಡ್ಡ ಮೋಸಗಾರರು ಎಂದು ನನ್ನ ಅಭಿಪ್ರಾಯವಾಗಿದೆ’ ಎಂದು ಬಾದಶಹನೆಂದನು.
ಬೀರಬಲ್ಲನು ಈ ಮಾತನ್ನು ಒಮ್ಮೆಲೇ ಒಪ್ಪಬಹುದೇ?
“ಛೇ ಛೇ ಹಾಗೆ ನಾನು ಒಡಂಬಡಲಾರೆ ಮಹಾಪ್ರಭೋ ಉದಾಹರಣೆಗೆ ಹೇಳಿರಿ ನೋಡೋಣ.”
“ಅಷ್ಟೋ ತಿಳಿಯುವುದಿಲ್ಲವೇ? ಗಾಡಿವಾನ, ದರವಾನ, ಪೈಲವಾನ, ಇವರೆಲ್ಲ ?”ಏನು
“ಹೌದು ಪ್ರಭೆ ‘ಮಹರ್ಬಾನ’ ಎಂದು ನಾನು ನಿಮ್ಮನ್ನು ಸಂಭೋಧಿಸುತ್ತೇನಲ್ಲ, ಇದಕ್ಕೇನು ಮಾಡಬೇಕು?”
ಆ೦ ಆ೦ ಅದು ನಿಜ, ಹಾಗಾದರೆ ನನ್ನ ಅಭಿಪ್ರಾಯ ಸರಿಯಾದುದಲ್ಲವೆನ್ನುವಿಯಾ?”
“ಎಷ್ಟೋ ಸರಿಯಲ್ಲ ಮಹಾರಾಜ! ಮೆಹರ್ಬಾನರಾದ ತಾವು ಮೋಸಗಾರರಾಗುವ ಪ್ರಸಂಗ ಬಂದಿತು. ಈ ಅಭಿಪ್ರಾಯ ತೆಗೆದೊಗೆಯಿರಿ.” ಬಾದಶಹನು ಸೋತ ಬಿನ್ನವನ್ನು ವ್ಯಕ್ತಪಡಿಸುವಂತೆ ನಗತೊಡಗಿದನು
ಮುಂದಿನ ಭಾಗ ಓದಿ…