ಹುಟ್ಟು-ಸಾವಿನ ಬಗ್ಗೆ ತಿಳಿಸುವ ಮಂಕುತಿಮ್ಮನ ಕಗ್ಗ ಡಿ.ವಿ.ಜಿ
ಹುಳು ಹುಟ್ಟಿ ಸಾಯುತಿರೆ ನೆಲ ಸವೆದು ಕರಗುತಿರೆ ।
ಕಡಲೊಳೆತ್ತಲೋ ಹೊಸ ದ್ವೀಪವೇಳುವುದು ।।
ಕಳೆಯುತೊಂದಿರಲಿಲ್ಲಿ ಬೆಳೆವುದಿನ್ನೊಂದೆಲ್ಲೊ ।
ಅಳಿವಿಲ್ಲ ವಿಶ್ವಕ್ಕೆ ಮಂಕುತಿಮ್ಮ ।।
ಅರ್ಥ
ಜಗತ್ತಿನಲ್ಲಿ ಅನೇಕ ಹುಳಗಳು ಹುಟ್ಟಿ ಸಾಯುತ್ತವೆ, ಪ್ರತಿದಿನವು ಮಣ್ಣು ಸವೆದು ಕರಗುವ ಹಾಗೆ
ಸಮುದ್ರದೊಳಗೆ ಹೊಸ ದ್ವೀಪವು ಹುಟ್ಟಿಕೊಳ್ಳುತ್ತದೆ.
ಇಲ್ಲಾರೊ ಸಾಯುವರು ಮತ್ತೆಲ್ಲೊ ಹುಟ್ಟುವರು
ಹೀಗೆ ಈ ಜಗತ್ತಿಗೆ ಎಂದು ಅಳಿವಿಲ್ಲ – ಮಂಕುತಿಮ್ಮ
Meaning in English
Even as a worm lives and dies, and land erodes away,
Somewhere deep in the ocean, a new island emerges.
Something wanes here, something grows elsewhere.
There is no end to this universe. –Mankuthimma
