ಕರ್ನಾಟಕ ಸರ್ಕಾರವು ಮಹಿಳೆಯರ ಆರೋಗ್ಯ, ಮಾನಸಿಕ ಸಮತೋಲನ ಮತ್ತು ಕೆಲಸದ ಪರಿಸರದ ಗೌರವವನ್ನು ಕಾಪಾಡುವ ಉದ್ದೇಶದಿಂದ ಪ್ರತಿ ತಿಂಗಳು 1 ದಿನ ವೇತನ ಸಹಿತ ರಜೆ (Menstrual Leave) ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ನಿರ್ಧಾರವು ಋತುಚಕ್ರದ ಸಮಯದಲ್ಲಿ ಮಹಿಳೆಯರು ಅನುಭವಿಸುವ ದೈಹಿಕ ನೋವು, ಮಾನಸಿಕ ಒತ್ತಡ ಮತ್ತು ಕಾರ್ಯಸ್ಥಳದ ಸವಾಲುಗಳನ್ನು ಅರಿತು ಕೈಗೊಳ್ಳಲಾಗಿದೆ. ಸರ್ಕಾರವು ಮಾನವೀಯ ಕಾಳಜಿ ಮತ್ತು ಲಿಂಗಸಮಾನತೆಯ ನಿಟ್ಟಿನಲ್ಲಿ ಇದು ಒಂದು ಪ್ರಗತಿಪರ ಹೆಜ್ಜೆ ಎಂದು ಪರಿಗಣಿಸಲಾಗಿದೆ.
ಪ್ರಮುಖ ಅಂಶಗಳು:
- ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದ ಎಲ್ಲ ಮಹಿಳಾ ನೌಕರರಿಗೆ ಅನ್ವಯ.
- ಪ್ರತಿ ತಿಂಗಳಿಗೆ 1 ದಿನ, ವರ್ಷಕ್ಕೆ ಗರಿಷ್ಠ 12 ದಿನ ರಜೆ.
- ಕೆಲಸದ ಸಮಯದಲ್ಲಿ ಮಾನವೀಯತೆ, ಗೌರವ ಮತ್ತು ಆರೋಗ್ಯದ ಹಕ್ಕು ಕಾಪಾಡುವ ಉದ್ದೇಶ.
- ಕಾರ್ಯಸ್ಥಳಗಳಲ್ಲಿ ಮಹಿಳೆಯರಿಗೆ ಅಗತ್ಯ ಸೌಲಭ್ಯಗಳ ಜಾಗೃತಿ ಮತ್ತು ವ್ಯವಸ್ಥೆ ಹೆಚ್ಚಿಸುವ ಕ್ರಮ.
“ಮಹಿಳೆಯರು ಅನುಭವಿಸುವ ದೈಹಿಕ ಮತ್ತು ಮಾನಸಿಕ ನೋವಿಗೆ ಸರ್ಕಾರ ಸ್ಪಂದಿಸಿದೆ. ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವ ಮಾತೃ ಹೃದಯ ಹೊಂದಿದ ಸರ್ಕಾರವೇ ಇಂಥ ನಿರ್ಧಾರ ಕೈಗೊಳ್ಳಬಹುದು.”
-ಮುಖ್ಯಮಂತ್ರಿ ಸಿದ್ದರಾಮಯ್ಯ
ಈ ನಿರ್ಧಾರವು ಮಾನವೀಯತೆ, ಸಬಲಿಕರಣ ಮತ್ತು ಲಿಂಗಸಮಾನತೆ ಯ ನಿಟ್ಟಿನಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ.
Akbar Birbal All News Astrology Books Culture Film Govt Scheme Health Information Inspiration Job News Mobiles News Pravasa Kathana Social Technology
“ಇಂದಿನ ಪ್ರಮುಖ ಸರ್ಕಾರಿ ಯೋಜನೆಗಳು + ಉದ್ಯೋಗ ಸುದ್ದಿ + ಕ್ರೀಡೆ + ಸಿನಿಮಾ – ಮೊದಲು ತಿಳಿಯಿರಿ!”
