ಸಂಘಟನಾ ಮಂತ್ರ – ವೇದಮಂತ್ರ -Sanghatana Mantra, Veda Mantra Kannada

ಸಂಘಟನಾ ಮಂತ್ರ – ವೇದಮಂತ್ರ -Sanghatana Mantra, Veda Mantra Kannada

ಸ್ತೋತ್ರ ವಲ್ಲರಿ ಕನ್ನಡ – Stotra Vallari Kannada

ವೇದಮಂತ್ರ – Veda Mantra Kannada 
ಸಂಘಟನಾ ಮಂತ್ರ – Sanghatana Mantra Kannada

ಆಡಿಯೋ ಕೆಳಲು ಕೆಳಗಡೆ ಪ್ಲೆ ಮಾಡಿ

ಓಂ ಸಂ ಗಚ್ಛಧ್ವಂ ಸಂ ವದಧ್ವಂ ಸಂ ವೋ ಮನಾಂಸಿ ಜಾನತಾಮ್| 

ದೇವಾ ಭಾಗಂ ಯಥಾ ಪೂರ್ವೇ ಸಂಜಾನಾನಾ ಉಪಾಸತೇ||

ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ

ಮನಃ ಸಹ ಚಿತ್ತಮೇಷಾಮ್|

ಸಮಾನಂ ಮಂತ್ರಮಭಿ ಮಂತ್ರಯೇ ವಃ ಸಮಾನೇನ

ವೋ ಹವಿಷಾ ಜುಹೋಮಿ||

ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ|

ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ||

ಓಂ ಶಾಂತಿಃ ಶಾಂತಿಃ ಶಾಂತಿ: 

ಸಂಘಟನಾ ಮಂತ್ರ ಅರ್ಥ (Meaning of Sanghatana Mantra)ವೇದ ಮಂತ್ರ ಅರ್ಥ (Meaning of veda Mantra)

(ಓ ಸಾಧಕ ಜನರೇ) ನೀವು ಯಾವಾಗಲೂ ಒಗ್ಗಟ್ಟಿನಿಂದ ಇರುತ್ತಾ ಎಲ್ಲಿಗೆ ಹೋಗಬೇಕಾದರು ಜೊತೆಯಲ್ಲಿಯೇ ಹೋಗಿರಿ. ಪರಸ್ಪರ ವಿರೋಧವನ್ನು ಬಿಟ್ಟು ಒಂದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಮಾತನಾಡಿರಿ. ಬಿನ್ನಾಭಿಪ್ರಾಯಗಳಿಗೆ ಎಡೆಗೊಡದೆ ನಿಮ್ಮೆಲ್ಲರ ಮನಸ್ಸು ಏಕಭಾವದಿಂದರಲಿ. ಹಿಂದೆ ದೇವತೆಗಳು ಯಾವ ರೀತಿಯಲ್ಲಿ ತಮ್ಮ ಹವಿರ್ಭಾವಗಳನ್ನು ಸೌಹಾರ್ದದಿಂದ ಸ್ವೀಕರಿಸುತ್ತಿದ್ದರೋ ಹಾಗೆಯೇ ನೀವು ಕೂಡ ಭಗವಂತನ ಅನುಗ್ರಹದಿಂದ ಪ್ರಾಪ್ತವಾದ ಭಾಗ್ಯವನ್ನು ಎಲ್ಲರೂ ಕುಡಿ ಸಹಭಾವದಿಂದ ಅನುಭವಿಸಿರಿ. 

ನಿಮ್ಮ ಸುತ್ತಿಯು ಒಂದೇ ವಿಧವಾಗಿರಲಿ. ಅದರಿಂದ ಲಭಿಸುವ ಫಲವು ಎಲ್ಲರಿಗೂ ಸಮಾನವಾಗಿ ಪ್ರಾಪ್ತವಾಗಲಿ. ಎಲ್ಲರ ಮನಃ ಪ್ರವೃತ್ತಿಯು ಒಂದೇ ತೆರೆನಾಗಿರಲಿ. ಅವರ ವಿವೇಕ ಜ್ಞಾನವು ಒಂದೇ ವಿಧವಾಗಿರಲಿ. (ಎಲೈ ದೇವತೆಗಳೇ), ನಾನು ನಿಮಗೋಸ್ಕರ ಒಂದೇ ವಿಧವಾದ ಮಂತ್ರವನ್ನು ಪಠಿಸುತ್ತಾ ಒಂದೇ ವಿಧವಾದ ಹವಿಸ್ಸಿನಿಂದ ಅಹುತಿಯನ್ನು ಅರ್ಪಿಸುತ್ತೇನೆ. 

(ಓ ಸಾಧಕ ಜನರೇ!) ನಿಮ್ಮಲ್ಲಿ ಶ್ರೇಷ್ಠಮಟ್ಟದ ಸಾಮರಸ್ಯ, ಸೌಹಾರ್ದಗಳು ನೆಲೆಗೊಳ್ಳುವುದಕ್ಕಾಗಿ ನಿಮ್ಮ ಉದ್ದೇಶ, ಮನೋರಥ ಮತ್ತು ಅಂತರಂಗದ ಅಭಿಪ್ರಾಯಗಳು ಒಂದೇ ಆಗಿರಲಿ. ಓಂ ಶಾಂತಿಃ ಶಾಂತಿಃ ಶಾಂತಿ: 

Leave a Comment

Comments

No comments yet. Why don’t you start the discussion?

    Leave a Reply