ಬನ್ನಿ ಸೋದರರೆ ಬನ್ನಿ ಬಾಂಧವರೆ
ಹೃದಯ ಹೃದಯಗಳ ಬೆಸೆಯೋಣ
ವಸುಧಾ ಕುಟುಂಬ ರಚಿಸೋಣ
ಮೊಳಗಲಿ ತಾಯ ಯಶೋಗಾನ
ಭಾರತೀ ಜಯ ಭಾರತೀ
ಜಯ ಭಾರತೀ ಜಯ ಭಾರತೀ ||ಪ||
ಹಸಿವಡಗಲಿ ತೃಷೆ ಹಿಂಗಲಿ – ಅಜ್ಞಾನದ ಪೊರೆ ಹರಿಯಲಿ
ರೋಗ ರೂಢಿಗೊದಗಲಿ ಅವಸಾನ – ಸುತರೆಮಗಿದು ಕರ್ತವ್ಯಪಣ
ಧರೆ ಎನಿಸಲಿ ಆನಂದವನ || ವಸುಧಾ ಕುಟುಂಬ … ||೧||
ಕೊರತೆ ಕಲುಷಗಳನಳೆದಳೆದು – ಸರಿಯುತ್ತರ ಸುರಿಮಳೆಗರೆದು
ಸರ್ವವ್ಯಾಪಿಯಾಗಲಿ ಸಂಕ್ರಮಣ – ಸಂಘಟನಾಬಲ ನಿರ್ಮಾಣ
ವಿಶ್ವ ಸಂತತಿಯ ಕಲ್ಯಾಣ || ವಸುಧಾ ಕುಟುಂಬ … ||೨||
ಹಿಂದು ಚಿಂತನಾನುಷ್ಠಾನ – ತಂದೊಲಿಸಲಿ ಜಗದುತ್ಥಾನ
ಮಾತೆ ಭಾರತಿಯ ವೈಭವ ಸುದಿನ – ಮೈದಾಳಲಿ ನೆಲದಭಿಮಾನ
ಹಿಂದುತ್ವದ ನವ ಜಾಗರಣ || ವಸುಧಾ ಕುಟುಂಬ … ||೩||
