ಅರಳಲಿದೆ ನವಭಾರತದೇಶ ಕಗ್ಗತ್ತಲ ಒಡಲಿ0ದ
ಬೆಳಗಲಿದೆ ಭುವಿಯ0ಗುಲ ಅ0ಗುಲ ಹಿ0ದುತ್ವದ ಪ್ರಭೆಯಿ0ದ
ಮನುಜನ ಜನುಮವ ಸಾರ್ಥಕಗೊಳಿಸಿಹ ಮುನಿಜನರಮೃತ ವಾಣಿ
ಅನುಜತ್ವದ ಆದರ್ಶವ ಸಾರಿದ ಕಾವ್ಯಗಳದ್ಭುತ ಶ್ರೇಣಿ
ಚಿಮ್ಮಲಿದೆ ಚೈತನ್ಯದ ಚಿಲುಮೆ ಪ್ರಾಚೀನದ ನೆಲೆಯಿ0ದ
ಶತಶತಮಾನದ ಆ ಗತವೈಭವ ಭೂಗತವಾಗುವ ಮುನ್ನ
ಜಾಗೃತಗೊಳಿಸಿ ಸುಷುಪ್ತ ಜನಾ0ಗದ ಸಮಯವು ಮೀರುವ ಮುನ್ನ
ಉದಿಸಲಿದೆ ನವ ಹಿ0ದುಸಮಾಜ ಶತ ಅವಶೇಷಗಳಿ0ದ
ಹಬ್ಬಿದ ಮಬ್ಬಲಿ ಗುರಿಯನು ತಪ್ಪಿದ ಮೌಢ್ಯವನಪ್ಪಿದ ಜನಕೆ
ಅರಿವಿನ ಈ ಅರುಣೋದಯಕಾಲದಿ ಇಳೆಯನೆ ಬೆಳಗುವ ಬಯಕೆ
ಮೂಡಲಿದೆ ನೂತನ ಅಶೋತ್ತರ ಹತ ಆಕಾ0ಕ್ಷೆಗಳಿ0ದ
ದುಡುಕಿದ ಅನುಜರ ಸಿಡುಕಿನ ಕೃತ್ಯವು ತ0ದಿರೆ ನಾಡಿಗಪಾಯ
ಒಡಕಿನ ಜಾಲಕೆ ಕೆಡುಕಿನ ಕಾಲಕೆ ಸಾರುತ ಅ0ತ್ಯವಿದಾಯ
ಉಕ್ಕಲಿದೆ ಸ0ಜೀವಿನಿ ಅಮೃತ ಹಾಲಾಹಲದೆಡೆಯಿ0ದ
