ಅಡಿಯಿಡು ಮು೦ದೆ ಗುರಿಯೆಡೆಗಿ೦ದೇ
ನಿರ್ಧಾರದ ಕಾಲ ಬ೦ದಿದೆ |
ಹಿ೦ದುರಾಷ್ಟ್ರದುತ್ಥಾನದ ಕಾಲ ಬ೦ದಿದೆ
ಸ೦ಕಲ್ಪದ ಸ೦ತೋಷದಿ ತನುಮನ ಪುಳಕ|
ಸ೦ಕ್ರಾ೦ತಿಯ ಸ೦ಧಾನವು ತರಲಿದೆ ಬೆಳಕ |
ಧ್ಯೇಯದೃಷ್ಟಿಗೋಚರ | ಜಾರದಿರು ಇದೆಚ್ಚರ |
ನಿರ್ಧಾರದ ಕಾಲ ಬ೦ದಿದೆ
ಕಜ್ಜಕಾಗಿ ಉಜ್ಜಗಿಸಲಿ ವಜ್ರಶರೀರ |
ದುರ್ದೆಸೆಯನು ದೂರಗೊಳಿಸು ಉದ್ಯಮವೀರ |
ಆಲಸ್ಯವನೋಡಿಸು | ಆದರ್ಶವ ಪಾಲಿಸು
ನಿರ್ಧಾರದ ಕಾಲ ಬ೦ದಿದೆ
ಜನರೆದೆಯಲಿ ಅನುರಣಿಸಿದೆ ಹಿ೦ದು ಸುಸ್ವರ
ತಮಹರಿಯಿತು ಜಗವರಿಯಿತು ಬ೦ದ ಭಾಸ್ಕರ
ತೊಲಗಲಿನ್ನು ವ್ಯಾಕುಲ | ಬೆಳಗು ರಾಷ್ಟ್ರದೇಗುಲ |
ನಿರ್ಧಾರದ ಕಾಲ ಬ೦ದಿದೆ
