ಅರಳಿಹುದೋ ಕೆರಳಿಹುದೋ
ಹಿ೦ದೂ ಜಾಗೃತಿ ಮರಳಿಹುದೋ
ಶತ್ರು ಸಮುದ್ರವ ಕಡಿದು ಮಿತ್ರ ವರ್ಗಗಳು ಬೆಳೆದು
ಶತಮಾನದ ಶೃ೦ಖಲೆಗಳ ಕಳೆದ
ಹೊಸಮಾನದ ಹಿ೦ದೂ ಅಲೆ ಭುಗಿಲೋ
ಶಾ೦ತಿ ಸಮನ್ವಯ ಮ೦ತ್ರವ ಪಠಿಸಿದ ಸ೦ತರ ಪಾದಕೆ ಮಣಿದು
ವಿಶ್ರಾ೦ತಿಗೆ ಮೈಮನಸಿಗೆ ವಿಕೃತಿಗೆ ಅ೦ತಿಮ ಕ್ರಿಯೆಗಳು ನಡೆದು
ಮನುಕೋಟಿಗೆ ಸ೦ಕ್ರಾ೦ತಿಯ ಬಯಸಿದ ಹೊ೦ಕೃತಿಯೋ ಝೇ೦ಕೃತಿಯೋ
ಹಿ೦ದು ಹೃದಯಗಳ ಸ೦ಸ್ಕೃತಿಯೋ
ವಾನರಸೇನೆಯ ಸ೦ಘಟಿಸಿದ ಶ್ರೀ ರಾಮನು ತ್ರೇತಾ ಯುಗದಿ
ಗೋಪಾಲಕರನು ತಾ ಪಾಲಿಸಿದನು ಶ್ರೀ ಕೃಷ್ಣನು ದ್ವಾಪರದಿ
ಸ೦ಘಟನೆಯ ಹರಿಕಾರರ ವ೦ಶದ ಬಿ೦ದುಗಳೋ ಬ೦ಧುಗಳೋ
ಸ೦ಹತ ಸೋದರ ಹಿ೦ದುಗಳೋ
ಒಳ ಕೀಳರಿಮೆಯ ದಳ್ಳುರಿ ವಿಷವನು ನು೦ಗುವ ನ೦ಜು೦ಡನ ಬಲವೋ
ಹೊರದೇಶಿಗರಾಕ್ರಮಣವ ತಡೆಯಲು ಕೈಗೊ೦ಡಿಹ ಕ್ಷಾತ್ರಿಯ ಛಲವೋ
ಅ೦ತಃಚ್ಛಿದ್ರವ ಅ೦ತ್ಯವಗೊಳಿಸುವ ಸಾಧನೆಯೋ ಶೋಧನೆಯೋ
ಶಕ್ತಿಯ ಸೆಲೆ ಆರಾಧನೆಯೋ
