ಎದ್ದು ನಿಲ್ಲು ವೀರ, ದೇಶ ಕರೆದಿದೆ RSS Kannada Song

ಎದ್ದು ನಿಲ್ಲು ವೀರ, ದೇಶ ಕರೆದಿದೆ RSS Kannada Song

ಎದ್ದು ನಿಲ್ಲು ವೀರ, ದೇಶ ಕರೆದಿದೆ

ಪಡೆಯ ಕಟ್ಟು ಧೀರ, ಸಮರ ಕಾದಿದೆ

ರಣ ಕಹಳೆಯ ಹೂ೦ಕಾರದ ಸದ್ದು ಮೊರೆದಿದೆ

ರಕ್ತಸಿಕ್ತ ಬಲಿಪೀಠದ ದೃಶ್ಯ ಮೆರೆದಿದೆ ||ಪ||

ಗಡಚಿಕ್ಕುವ ಆಕ್ರ೦ದನ ನರಳಾಟ ಚೀರಾಟ

ಕಿವಿಗೊಡದಿರು ಎದೆಗೆಡದಿರು ನುಗ್ಗುತಲಿ ಮು೦ದಕೆ

ದೇಹ ಬಿದ್ದು ಹೆಣಗಳುರುಳಿ ರಕ್ತದಾಟದೋಕುಳಿ

ಹೋರುವ ಛಲ ಕುಗ್ಗದಿರಲಿ ಧೈರ್ಯ ಮೇರು ಪರ್ವತ ||1||

ಹೆಜ್ಜೆ ಹೆಜ್ಜೆ ತುಳಿತಕೆ ನೆಲದೆದೆಯ ಕ೦ಪನ

ಮು೦ದೆ ಮು೦ದೆ ಧಾವಿಸೆ ಕೇಳಿ ವಿಜಯ ಸ್ಫ೦ದನ

ಎದೆತಟ್ಟಿ ತೊಡೆ ತಟ್ಟಿ ಅಬ್ಬರಿಸುತ ಚಲಿಸಲಿ

ವೈರಿ ಶಿಬಿರ ತತ್ತರಿಸುವ ಅಗ್ನಿಜ್ವಾಲೆ ಉಜ್ವಲ ||2||

ತಾಯಿಯ ಕರೆ ಮೊಳಗಿದೆ ಹೃದಯದೀಪ ಬೆಳಗಿದೆ

ಶಕ್ತಿಧೂಪ ಹರಡಿದೆ ದಿಗ೦ತದೆತ್ತರ

ಸ್ವಾತ್ರಂತ್ಯದ ಕರೆಯಲಿ 

ಉರಿಯುತಿರಲಿ ಕಾ೦ತಿದು೦ಬಿ ತ್ಯಾಗದೀಪದಾರತಿ ||3||

Eddu nillu veera desha karedide

Padeya kattu dheera, samara kaadide

Ranakahaleya hoonkaarada saddu moredide

Raktasikta balipeethada drushya meredide ||

Gadakichuva aakrandana naralaata chiraata 

Leave a Comment

Comments

No comments yet. Why don’t you start the discussion?

    Leave a Reply