ಉಘೇ ವೀರಭೂಮಿಗೆ, ಉಘೇ ಉಘೇ ಉಘೇ ಉಘೇ
ಉಘೇ ವಿರಭೂಮಿಗೆ
ಕಹಳೆ ಶ್ರುತಿಗೆ ರುದ್ರ ಕೃತಿಗೆ,
ಸಮರರ೦ಗದಮರ ಸ್ಮೃತಿಗೆ
ಎತ್ತರೆತ್ತರೆತ್ತರಕ್ಕೆ ಏರಲೆಮ್ಮ ಬಾವುಟ
ಉತ್ತರುತ್ತರುತ್ತರಕ್ಕೆ ಬೆಳೆಯಲೆಮ್ಮ ಭೂಪಟ
ಯೋಧವಸ್ತ್ರ ಹೆಗಲ ಶಸ್ತ್ರಧರಿಸಿ ಜನ್ಮ ಭೂಮಿಗೆ
ಅಗ್ನಿವರ್ಷ ಶೌರ್ಯಸ್ಪರ್ಶ ತೈಲಶಕಟ ಸಾವಿರ
ಸಾಲು ಸಾಲು ಬೂಟುಕಾಲು ನಡೆವ ಸೈನ್ಯ ಸಾಗರ
ಬಾಳಿನೆಲ್ಲ ರುಧಿರವೆಲ್ಲ ಕುದಿವ ದೃಶ್ಯ ಸೇಡಿಗೆ
ಹೊರಟಿತಿದೋ ಅಜಿ೦ಕ್ಯಸೇನೆ ರಾಷ್ಟ್ರಕಿದುವೆ ರಕ್ಷಣೆ
ರಣಪ್ರಯಾಣ ವಿಜಯಗಾನ ವಿಮಾನಯಾನ ಗರ್ಜನೆ
ತಾಯ ಭಕ್ತಿ ತೋಳಶಕ್ತಿ ಇದು ಸ್ವದೇಶದುಳಿವಿಗೆ
ರಾಷ್ಟ್ರಯಜ್ಞ ದುರಿಯ ದಾಹ ತೀರಲೆ೦ದು ಇ೦ದಿಗೆ
ಶಸ್ತ್ರಪೂಜೆಯಾಗಲೆ೦ದು ವೈರಿ ಪ್ರಾಣದೊ೦ದಿಗೆ
ಕ್ಷಾತ್ರಭಾವ ಕೆರಳುತಿಹುದು ರಕ್ತದರ್ಘ್ಯ ಗಳಿಕೆಗೆ
