ಅನುಪಮ ಆದರ್ಶದ ನುಡಿಯೊ೦ದಕೆ
ದೊರೆತಿದೆ ಇಲ್ಲಿ ಉದಾಹರಣೆ
ಕ್ರಿಯಾಸಿದ್ಧಿಃ ಸತ್ವೆ ಭವತಿ ಮಹತಾ೦ ನೋsಪಕರಣೆ ||
ಹಣವಿಲ್ಲ, ಹಣ ಹ೦ಬಲವಿಲ್ಲ ಅಧಿಕಾರದ ಅ೦ದಣವಿಲ್ಲ
ಬಣವಿಲ್ಲ ಜನ ಬೆ೦ಬಲವಿಲ್ಲ ಅನುಕೂಲತೆಗಳ ಸುಳಿವಿಲ್ಲ
ಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಹಿ೦ದೂ ಸ೦ಘಟನೆ ||
ರಾಷ್ಟ್ರಭಕ್ತಿ ಸದ್ಗುಣಗಳನುಳಿದರೆ ಬಡತನವೇ ಮೈ ಮನೆಯೆಲ್ಲಾ
ಪದವಿ ಬೇರೆ ಪ್ರವೃತ್ತಿ ಬೇರೆ ಇದು ಪರಿಹಾಸ್ಯದ ನುಡಿ ಜನಕೆಲ್ಲ
ವ್ಯ೦ಗ್ಯ ವಿರೋಧವನೆದುರಿಸಿ ಕೇಶವ ಕಟ್ಟಿದ ಹಿ೦ದೂ ಸ೦ಘಟನೆ ||
ಸಾವಿರದಿತಿಹಾಸವ ಕಟ್ಟಿದ ಮನೆ ಬಾನೆತ್ತರ ಭೂಮಿಯ ಅಗಲ
ಶತಮಾನದ ದಾಸ್ಯದ ಬಿರುಗಾಳಿಗೆ ನಡುಗಿತು ನಡೆಯಿತು ಒಳಜಗಳ
ಪುನರಪಿ ಜೀರ್ಣೋದ್ಧಾರಕ್ಕೆ ಕೇಶವ ಕಟ್ಟಿದ ಹಿ೦ದೂ ಸ೦ಘಟನೆ ||
