ಉಜ್ವಲ ಇತಿಹಾಸ ಎಮ್ಮದು, ಭಾರತ ನಾಡಿನ ಸ್ಫೂರ್ತಿಯದು
ಪವಿತ್ರಧರ್ಮದ ಗೌರವಕಾಗಿ ಮೃತ್ಯುವನಪ್ಪಿದ ಹಕಿಕತನೂ
ಗುರುಗೋವಿ೦ದನ ವೀರ ಸುಪುತ್ರರು ತೆತ್ತರು ಅಸುವನು ಹರುಷದಲಿ ಧೈರ್ಯದಿ ಗೋಡೆಯ ಮಧ್ಯದಲಿ
ನಾಡಿನ ಗೌರವರಕ್ಷಣೆಗಾಗಿ ಸಹಿಸಿದ ರಾಣನು ಕಷ್ಟವನು
ರಜಪೂತರ ನಿಜ ತೇಜವ ತೋರುತ ದೇಶದೊಳಲೆದನು ಕ೦ಗೆಟ್ಟು ಮಾಡಿದ ಜನತೆಯ ಒಗ್ಗಟ್ಟು
ವೀರ ಶಿವಾಜಿಯು ಕಟ್ಟಿದ ಸೇನೆಯು ಎದುರಿಸೆ ಮೊಗಲರ ಕಿರುಕುಳವ
ವೀರ ಶಿರೋಮಣಿ ಝಾನ್ಸಿರಾಣಿಯು ನಿ೦ತಳು ಬ್ರಿಟಿಷರ ಎದುರಾಗಿ
ಮಾತೆಯ ಮುಕ್ತಿಯ ಕರೆಗಾಗಿ
ರಕ್ತದಿ ಬರೆದಿಹ ವೀರ ಚರಿತ್ರೆಯ ಪಠಿಸುವ ಪ್ರತಿದಿನ ಹೆಮ್ಮೆಯಲಿ
ಸಾಹಸ ಕಾರ್ಯವಗೈದಿಹ ವೀರರ ಸ್ಮರಿಸುತ ಸಾಗುವ ಪಥದಲ್ಲಿ
ನಮಿಸುವ ಅವರನು ಮನದಲ್ಲಿ
Ujvala ethihaasa emmadu, bhaarata naadina spurthiyadu
Pavitra dharmada gouravakaagi mryutyuvinappida hakikatanu
Gurugovindana veera suputraru tettaru asuvana harushadali dhairyadi godeya madhyadali
Naadina gourava rakshanegaagi sahisida raananu kashtavanu
Rajaputara neeja tevava toruta deshadolaleyanu
Kangettu maadida janateya oggattu ||1||
