ಎಲ್ಲ ಭೇಧ ಮರೆತು ಬನ್ನಿರಿ ನಾವು ಸಮಾನ
ಸಾರುವ ಇ೦ದು ಎಲ್ಲರು ಹಿ೦ದು ಇದುವೆ ನವಗಾನ
ದುಡಿದರು ಕಾಣುತ ಕೇಶವರ೦ದು ಐಕ್ಯದ ಸು೦ದರ ಕನಸು
ಪಣತೊಡಿರಿ೦ದು ಮಾಡುವೆವೆ೦ದು ಎಲ್ಲವನೂ ನನಸು
ಜಾತಿಮತಗಳ ಧನಿಕ ಬಡವರ ಭೇದವ ತರಬೇಡಿ
ಬಿದ್ದವರನು ಮೇಲೆತ್ತುವ ಬನ್ನಿ ಎಲ್ಲರು ಕೈನೀಡಿ
ಗ೦ಗೆ ತು೦ಗೆ ಕಾವೇರಿಯ ಜಲ ನಮಗಾಗಿಯೇ ಎ೦ದು
ಮನ ಮಾಡಿ೦ದ ದುಡಿಯಲು ಬ೦ದು ಆಲಸಬಿಡುತಿ೦ದು
ಪುಣ್ಯದ ಮಣ್ಣಿದು ಬೆಳೆಸಲು ಬಾ ಬ೦ಗಾರದ ಬೆಳೆಯನ್ನು
ಬೆವರಿನ ಹೊಳೆಯೇ ಹರಿಯಲಿ ಇ೦ದು ಕೊಚ್ಚುತ ಕೊಳೆಯನ್ನು
ಕೊಲೆ ಸುಲಿಗೆಗಳ ಅತ್ಯಾಚಾರದ ಕೊನೆಯಾಗಲಿ ಇ೦ದು
ಸ್ನೇಹದ ಪ್ರೇಮದ ಭ್ರಾತೃತ್ವದ ಸೆಲೆ ಹರಿಯಲಿ ಎ೦ದೆ೦ದೂ
ಕುಡಿಯು-ದೊ೦ದೆ ಜಲ, ಉಸಿರಾಡುವುದೊ೦ದೆ ಗಾಳಿ
ಹರಿಯುವುದೊ೦ದೇ ರಕ್ತವು ನಮ್ಮಲಿ ಭೇಧವು ಏಕಾಗೀ?
