ನಮಸ್ತೇ ಸದಾ ವತ್ಸಲೇ ಮಾತೃಭೂಮೇ
ತ್ವಯಾ ಹಿಂದುಭೂಮೇ ಸುಖಂ ವರ್ಧಿತೋsಹಮ್
ಮಹಾಮಂಗಲೇ ಪುಣ್ಯಭೂಮೇ ತ್ವದರ್ಥೇ
ಪತತ್ವೇಷ ಕಾಯೋ ನಮಸ್ತೇ ನಮಸ್ತೇ ||೧||
ಪ್ರಭೋ ಶಕ್ತಿಮನ್ ಹಿಂದುರಾಷ್ಟ್ರಾಂಗಭೂತಾ
ಇಮೇ ಸಾದರಂ ತ್ವಾಂ ನಮಾಮೋ ವಯಂ
ತ್ವದೀಯಾಯ ಕಾರ್ಯಾಯ ಬದ್ಧಾಕಟೀಯಂ
ಶುಭಾಮಾಶಿಷಂ ದೇಹಿ ತತ್ಪೂರ್ತಯೇ |
ಅಜಯ್ಯಾಂ ಚ ವಿಶ್ವಸ್ಯ ದೇಹೀಶ ಶಕ್ತಿo
ಸುಶೀಲಂ ಜಗದ್ಯೇನ ನಮ್ರಂ ಭವೇತ್
ಶ್ರುತಂ ಚೈವ ಯತ್ ಕಂಟಕಾಕೀರ್ಣಮಾರ್ಗಂ
ಸ್ವಯಂ ಸ್ವೀಕೃತಂ ನಃ ಸುಗಂ ಕಾರಯೇತ್ ||೨||
ಸಮುತ್ಕರ್ಷ ನಿಃಶ್ರೇಯಸಸ್ಯೈಕಮುಗ್ರಂ
ಪರಂ ಸಾಧನಂ ನಾಮ ವೀರವ್ರತಂ
ತದಂತಃ ಸ್ಫುರತ್ವಕ್ಷಯಾ ಧ್ಯೇಯನಿಷ್ಠಾ
ಹೃದಂತಃ ಪ್ರಜಾಗರ್ತು ತೀವ್ರಾನಿಶಮ್ |
ವಿಜೇತ್ರಿ ಚ ನಃ ಸಂಹತಾ ಕಾರ್ಯಶಕ್ತಿರ್
ವಿಧಾಯಾಸ್ಯ ಧರ್ಮಸ್ಯ ಸಂರಕ್ಷಣಮ್
ಪರಂ ವೈಭವಂ ನೇತುಮೇತತ್ ಸ್ವರಾಷ್ಟ್ರಮ್
ಸಮರ್ಥಾ ಭವತ್ವಾಶಿಷಾ ತೇ ಭೃಶಮ್ ||೩||
|| ಭಾರತಮಾತಾ ಕಿ ಜಯ್ ||
ಅರ್ಥ
ಹೆ ವತ್ಸಲೇಯಾದ ಮಾತೃಭೂಮಿಯೇ! ನಿನಗೆ ನಾನು ಸದಾ ವಂದಿಸುವೆ. ಹೇ, ಹಿಂದುಭೂಮಿಯೇ! ನೀನು ನನ್ನನ್ನು ಸುಖದಲ್ಲಿ ಬೆಳೆಸಿರುವೆ. ಹೇ, ಮಹಾಮಂಗಲೆಯಾದ ಪುಣ್ಯಭೂಮಿಯೇ! ನಿನಗಾಗಿಯೇ ನನ್ನೀ ದೇಹವು ಅರ್ಪಿತವಾಗಲಿ. ನಿನಗೆ ಅನೇಕ ಪ್ರಣಾಮಗಳು.
ಹೇ, ಸರ್ವಶಕ್ತಿವಂತನಾದ ಪರಮೇಶ್ವರನೇ! ಹಿಂದುರಾಷ್ಟ್ರದ ಅವಯವಾಗಳಂತಿರುವ ನಾವು ನಿನಗೆ ಆದರದಿಂದ ನಮಸ್ಕರಿಸುತ್ತೇವೆ. ನಿನ್ನ ಕಾರ್ಯಕ್ಕಾಗಿಯೇ ನಾವು ನಡು ಕಟ್ಟಿದ್ದೇವೆ. ಅದನ್ನು ಪೂರ್ಣಗೊಳಿಸಲು ನಮಗೆ ಶುಭಾಶಿರ್ವಾದವನ್ನು ನೀಡು. ವಿಶ್ವವು ಜಯಿಸಲಾಗದಂತಹ ಶಕ್ತಿಯನ್ನು, ಇಡಿ ಜಗತ್ತೇ ತಲೆಬಾಗುವಂತಹ ಪರಿಶುದ್ಧ ಶೀಲವನ್ನು ಮತ್ತು ನಾವು ಬುದ್ಧಿಪುರಸ್ಸರವಾಗಿ ಸ್ವೀಕರಿಸಿರುವ ಕಂಟಕಮಯ ಮಾರ್ಗವನ್ನು ಸುಗಮಗೊಳಿಸಬಲ್ಲ ಜ್ಞಾನವನ್ನು ನಮಗೆ ದಯೆಪಾಲಿಸು.
ಅಭ್ಯುದಯದೊಡನೆ ನಿ:ಶ್ರೇಯಸ್ಸನ್ನು ಸಾಧಿಸಲು ಏಕಮಾತ್ರ ಶ್ರೇಷ್ಠ ಸಾಧನವಾದ ಉಗ್ರ ವೀರವ್ರತವು ನಮ್ಮ ಅಂತ:ಕರಣದಲ್ಲಿ ಸ್ಪುರಿಸಲಿ. ಅಕ್ಷಯವಾದ ಪ್ರಖರವಾದ ಧ್ಯೇಯನಿಷ್ಠೆಯು ನಮ್ಮ ಹೃದಯದಲ್ಲಿ ಸದಾ ಎಚ್ಚರವಾಗಿರಲಿ. ನಮ್ಮ ವಿಜಯಶಾಲಿಯಾದ ಸಂಘಟಿತ ಕಾರ್ಯಶಕ್ತಿಯು ನಮ್ಮ ಧರ್ಮವನ್ನು ಸಂರಕ್ಷಿಸಿ, ನಮ್ಮಿ ರಾಷ್ಟ್ರವನ್ನು ಪರಮ ವೈಭವಕ್ಕೇರಿಸಲು ನಿನ್ನ ಆಶೀರ್ವಾದದಿಂದ ಅತ್ಯಂತ ಸಮರ್ಥವಾಗಲಿ.
|| ಭಾರತ ಮಾತೆಗೆ ಜಯವಾಗಲಿ||
