ಯುಗದ ಆಹ್ವಾನವಿದು ಕೇಳ ಬನ್ನಿ
ತಾಯ್ನೆಲದ ಕರೆಗೆ ಓಗೊಡುತ ಬನ್ನಿ ||ಪ||
ಹೂಣ ಗ್ರೀಕರ ಗೆಲಿದು ಶಕ ಕುಶಾನರ ನುಲಿದು
ಆಂಗ್ಲ ಮೊಘಲರ ಹಣಿದ ಹಿರಿಮೆ ಇರಲು
ತಡೆಯುವವರಾರಿನ್ನು ಬಿಡದೆ ಮುಂದಡಿಯಿಡಲು
ವಿಶ್ವವಿಜಯಧ್ವಜವ ಮೆರೆಸ ಬನ್ನಿ. ||1||
ತಾಯ್ನೆಲದ ಕರೆಗೆ ಓಗೊಡುತ ಬನ್ನಿ
ಸಾವಿರದ ಇತಿಹಾಸ ನಿತ್ಯ ಪ್ರೇರಕವಾಗಿ
ಎಮ್ಮ ಹಿರಿಯರ ಬಾಳು ದೀಪವಾಗಿ
ನವಿರುಗೊಳ್ಳಲಿ ತ್ರಾಣ ಕ್ಷಾತ್ರ ಶಕ್ತಿಯ ಸ್ಫುರಣ
ನಾಡ ರಕ್ಷಾಕವಚ ಆಗ ಬನ್ನಿ ||2||
ತಾಯ್ನೆಲದ ಕರೆಗೆ ಓಗೊಡುತ ಬನ್ನಿ
ದೇಹವಿದು ನಶ್ವರವು ನಾಡೆಮಾಡು ಶಾಶ್ವತವು
ನಶ್ವರವು ಶಾಶ್ವತಕೆ ಮುಡಿಪು ಎನ್ನಿ
ಪರಮ ವೈಭವ ಪದವ ಜನುಮ ದಾತೆಗೆ ತರಲು
ಬೆವರು ನೆತ್ತರು ಬೆಲೆಯ ತೆರುವ ಬನ್ನಿ. ||3||
ತಾಯ್ನೆಲದ ಕರೆಗೆ ಓಗೊಡುತ ಬನ್ನಿ
Yugada aahvaanavidu kelabanni
Taaynelada karege ogoduta banni ||Pa||
Hoona greekara gelidu Shaka kushaanara nulidu
Aangla moghalara hanida hirime iralu
Tadeyuvavaraarinnu bidade mundadiyidalu
Vishvavijaya dhvajava meresa banni ||1||
