ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-13

ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-13

ರಾಜನೇ ತಂದೆಯು

ಓರೈತರುಣನು ಒಂದು ತಪ್ಪಿಗಾಗಿ ನ್ಯಾಯಾಲಯಕ್ಕೆ ಎಳೆಯಲ್ಪಟ್ಟನು. ನ್ಯಾಯನಿರ್ಣಯ ಕಾಲಕ್ಕೆ ಅವನ ತಾಯಿಯಾದ ಒಬ್ಬ ವೇಶೈಯು ತನ್ನ ಮಗನು ನಿರಪರಾಧಿಯೆಂದು ಸಾಕ್ಷಿ ನುಡಿಯಲು ಬಂದಳು. ಸಾಕ್ಷಿಗಾಗಿ ಅವಳನ್ನು ಚೌಕಿನಲ್ಲಿ ನಿಲ್ಲಿಸಿ ದೇವರಾಣಿ ಮೊದಲಾದವುಗಳಾದ ಬಳಿಕ ಅಕಬರನು “ಏನವ್ವ ನಿನ್ನ ಮಗನು ತನ್ನ ಹೆಸರನ್ನು ಹೇಳಿದನು. ಅವನ ತಂದೆಯ ಹೆಸರನ್ನು ಅವನು ಹೇಳಲಿಲ್ಲ. ಆದುದರಿಂದ ನೀನೇ ಅವನ ತಂದೆಯ ಹೆಸರನ್ನು ಹೇಳು” ಎಂದರು.

ವೇಶ್ಯಯು ಗಾಬರಿಯಿಂದ ಅತ್ತಿತ್ತ ನೋಡಿದಳು. ಮೇಲೆ ಕೆಳಗೆ ನೋಡಿದಳು. ನಾಚಿಕೆಯಿಂದ ಸುಮ್ಮನೇ ನಿಂತುಬಿಟ್ಟಳು.

“ಏಕೆ ನಿಂತಳು ಕೇಳಿ ಮಂತ್ರಿಗಳೆ, ಈ ಅಪರಾಧಿಯ ತಂದೆಯ ಹೆಸರನ್ನು ಹೇಳಲು ಆ ಸಾಧಿಗೆ ಹೇಳಿರಿ.”

ಮಂತ್ರಿಯ ಒತ್ತಾಯಕ್ಕೆ ಸಿಕ್ಕು ಉಪಾಯಗಾಣದೇ ಹೇಳಿದಳು. “ದಿಲ್ಲಿ ಸಾಮ್ರಾಟ ಅಕಬರ ಬಾದಶಹ.”

“ಆಂ ಏನದು ಹುಚ್ಚುಚ್ಚಾರ ಯಾರಲ್ಲಿ ಈ ಅವಿವೇಕಿಯನ್ನು ಕೂಡಲೇ ಹೊರಗೆ ಕರೆದೊಯ್ದು ಕಠಿಣ ರೀತಿಯಲ್ಲಿ ಶಿಕ್ಷೆ ವಿಧಿಸಿರಿ.”

“ಹಾಂ ಹಾಂ ತಡೆಯಿರಿ ತಡೆಯಿತಿ ಮಹಾಪ್ರಭೋ” ಬೀರಬಬಲ್ಲನು ಅಬಲೆಯ ಸಹಾಯಕ್ಕೆ ಮುಂದೆ ಬಂದನು, “ಸಾಧಿಯು ಹೇಳಿದ್ದು ನಿಜ. ಇವಳು ಮದುವೆ ಮಾಡಿಕೊಂಡು ಮನೆತನ ಮಾಡಿದ ಹೆಣ್ಣು ಮಗಳಲ್ಲ, ಇವಳು ವಾರಾಂಗನೆ, ಈ ಯುವಕನ ಜನನಕ್ಕೆ ನಿಮಿತ್ತರು. ಯಾರಾದರೆಂಬುದು ಪಾಪ ಅವಳಿಗೂ ಗೊತ್ತಿಲ್ಲ. ಆದುದರಿಂದ ಅಸತ್ಯ ನುಡಿಯಲಾರದೆ ದೇಶಕ್ಕೆಲ್ಲ ತಂದೆಯಾದ ತಮ್ಮ ಹೆಸರನ್ನೇ ಹೇಳಿ ತಾವೇ ಈ ಯುವಕನ ಪಿತೃ ಸಮಾನರು ಎಂದು ಅವಳ ಭಾವವಿದೆ ಅಲ್ಲವೇನವ್ವ?”

“ಹೌದು ಮಹಾನುಭಾವ, ನೀವಂದ ಮಾತಿನಿಂದಲೇ ಮಹಾಪ್ರಭುಗಳ ಹೆಸರನ್ನು ಹೇಳಿದೆನು. ಮತ್ತೇನೂ ಆದರಲ್ಲಿಲ್ಲ.”

ಅಕಬರನು ನಗತೊಡಗಿದನು “ಈ ವಿಷಯ ನನಗೆ ಹೇಗೆ ತಿಳಿಯಬೇಕು”’ ಎನ್ನುತ್ತ ನ್ಯಾಯಾಲಯದ ಕಾರ್ಯ ಮುಂದೆ ಸಾಗಿಸಿದನು.

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply