ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-12

ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-12

ಮಲೆಯಾಳದಲ್ಲಿ PART -2

ನೂರೈನೂರು ಮಕ್ಕಳಿದ್ದರು. ಇದರಲ್ಲಿ ಕೊಲೆ ಮಾಡಿಸಿಕೊಂಡವ ರಾರೆಂಬುದು ರಾಜನಿಗೂ ತಿಳಿಯುವದು ಕಷ್ಟ. ಆದರೆ ಮಹಾಮಂತ್ರಿಯು ಸುಳ್ಳುಗಾರನೇ? ಇದು ನಿಜವಿರಲೇಬೇಕೆಂದು ದುಃಖದ ಕೈಯ್ಯಲ್ಲಿ ಬುದ್ದಿ ಕೊಟ್ಟು ಅಪ್ಪಣೆ ವಿಧಿಸಿದನು. “ಕೊಲೆಗಾರನು ಯಾವನೇ ಇರಲಿ ಕೈಕಾಲುಗಳಿಗೆ ಬೇಡಿ ಹಾಕಿ ಕೂಡಲೇ ಸೆರಮನೆಗೆ ಕಳಿಸಬೇಕು. ನಾಳೆಯೇ ಅದರ ನ್ಯಾಯ ನಿರ್ಣಯಕ್ಕಾಗಿ ಆಸ್ಥಾನಕ್ಕೆ ತರಬೇಕು” ಎಂದನು. ಚಂದ್ರಶೇಖರನಿಗೆ ಇಷ್ಟೇ ಸಾಕು, ಆ ಅಪ್ಪಣೆಯನ್ನು ಸ್ವತಃ ತೆಗೆದುಕೊಂಡು ಬೀರಬಲ್ಲನ ಶೋಧಕ್ಕಾಗಿ ಹೊರಟನು. ಇದೆಲ್ಲ ವಿಷಯವೂ ಗುಪ್ತಚಾರರಿಂದ ಬೀರಬಲ್ಲನಿಗೆ ತಿಳಿಯಿತು. ಕೂಡಲೇ ತನ್ನ ಸಹಾಯಕ್ಕೆ ದಯಾರಾಮ, ಮಥುರಾದಾಸ ರೂಪವತಿಯರಿಗೆ ಹೇಳಿ ಕಳುಹಿಸಿ ತಾನಿದ್ದ. ಸ್ಥಳವನ್ನೂ ಅವರಿಗೆ ಅರುಹುವಂತೆ ವ್ಯವಸ್ಥೆ ಮಾಡಿದನು. ನೀಚನಾದ ಮಥುರಾದಾಸನು ಇದನ್ನೇ ಕೇಳಿ ಬಹಳ ಸಿಟ್ಟಿಗೆದ್ದು ಒದರಾಡಿ ಚೀರಾಡಿದನು. “ನನಗೆ ಗೊತ್ತಿತ್ತು, ಈ ಪರದೇಶಿಗಳು ನೀಚರೂ ಭಂಡರೂ ಎಂದು, ಅವನು ಸಾಯಲಿ ನನ್ನ ದುಡ್ಡು ಎತ್ತಿ ಹಾಕಿದ್ದಾನೆ. ನಿರ್ವಾಹವಿಲ್ಲದೆ ಅವನಿಗೆ ನಾನು. ಕೊಟ್ಟೆನು. ಎಂದು ನಾನು ಅವನಿಗೆ ದುಡ್ಡು ಕೊಟ್ಟೇನೂ ಅಂದೇ ಅದು ಮುಳುಗಿತೆಂದು ತಿಳಿದನು” ಎಂದು ಒದರಾಡಿ ಮನೆಯಲ್ಲಿ ತಣ್ಣಗೆ ಕುಳಿತನು.

ದಯಾರಾಮ, ರೂಪವತಿಯರು ಮಾತ್ರ ಬೀರಬಲ್ಲನ ಸಹಾಯಕ್ಕೆ ಧಾವಿಸಿದರು. ಆದರೆ ಅಷ್ಟರಲ್ಲಿ ಚಂದ್ರಶೇಖರನು ಸೇವಕರನ್ನು ಶಹರದ ತುಂಬೆಲ್ಲ ಬಿಟ್ಟು ಬೀರಬಲ್ಲನ ಶೋಧ ಮಾಡಿದನು. ಅವನ ಕೈ-ಕಾಲುಗಳಿಗೆ ಬೇಡಿ ತೊಡಿಸಿ ಸೆರೆಮನೆಗೆ ರವಾನಿಸಿದನು. ದಯಾರಾಮ ರೂಪವತಿಯರು ಬೀರಬಲ್ಲನನ್ನು ಬಹಳವಾಗಿ ಹುಡುಕಿದರು. ಎಲ್ಲಿಯೂ ಅವನ ಶೋಧವಾಗಲಿಲ್ಲ. ಕಡೆಗೆ ಸೆರೆಮನೆಗೆ ಒಯ್ದಿರಬೇಕೆಂದು ಬಗೆದು ಅಲ್ಲಿಗೆ ಬಂದರು.

ಅಲ್ಲಿ ಇದ್ದುದು ಗೊತ್ತಾಯಿತು. ಸೆರೆಮನೆಯ ಕಾವಲುಗಾರರು ಮೊದಮೊದಲು ಬೀರಬಲ್ಲನು ಸುಳಿವೇ ಹೇಳಿಲಿಲ್ಲ. ರೂಪವತಿಯು ಹಾವಭಾವ ಬೀರಿದಳು.

ಕಣ್ಣಳ ಬಾಣ ಬಿಟ್ಟಳು. ಹುಬ್ಬಿನ ಬಿಲ್ಲನ್ನು ಮಣಿಸಿದಳು. ನಗೆಯ ಮಲ್ಲಿಗೆಯನ್ನು ಉದುರಿಸಿದಳು. ಕಾವಲುಗಾರರು ಮರುಳಾದರು. ಐದೇ ನಿಮಿಷದಲ್ಲಿ ಬೀರಬಲ್ಲನನ್ನು ಕಂಡು ತಿರುಗಬೇಕೆಂಬ ಕರಾರಿನಿಂದ ಅವಳನ್ನು ಒಳಗೆ ಬಿಟ್ಟರು. ದಯಾರಾಮ ರೂಪವತಿಯರು ಸೆರೆಮನೆಯನ್ನು ಹೊಕ್ಕು ನೋಡಿದರು. ಬೀರಬಲ್ಲನು ಬಹಳೆ ಶಾಂತಚಿತ್ತನಾಗಿ ಧೈರ್ಯಗುಂದದೇ ಮಂದಸ್ಮಿತನಾಗಿ ಕುಳಿತದ್ದನ್ನು ಕಂಡು ಅಚ್ಚರಿಗೊಂಡರು. ಇವರನ್ನು ಕಂಡು ಬೀರಬಲ್ಲನು ಸಂತೋಷಪಟ್ಟು ಕಾನು ನಿಜವಾಗಿ ಮಾಡಿದುದೆಲ್ಲವನ್ನೂ ಆರುಹಿದನು. ರೂಪವತಿಯು ಹರುಷಭರಿತಳಾಗಿ “ನಿಮ್ಮನ್ನು ಪಾರು ಮಾಡುವದು ನನ್ನ ಕೈಯ್ಯಲ್ಲಿದೆ ಬಿಡಿರಿ ಎಂದು ಸೆರೆಮನೆಯಿಂದ ಲಗುಬಗೆಯಿಂದ ಹೊರಬಿದ್ದಳು. ದಯಾರಾಮನ್ನೂ ಅವಳನ್ನು ಹಿಂಬಾಲಿಸಿದನು.

ಮರುದಿನ ಸಭಾ ಸ್ಥಾನವು ನಡೆಯಿತು. ಆಸ್ಥಾನದಲ್ಲಿ ರಾಜಪುತ್ರನ ಕೊಲೆಯ ಬಗ್ಗೆ ಮಹಾರಾಜರಿಂದ ಸ್ವತಃ ತೀರ್ಪು ಹೇಳುವದಿತ್ತು. ಆದುದರಿಂದ ಸಕಲ ಮಾಂಡಲೀಕರೂ, ಸೇನಾಪತಿಗಳೂ, ಮಂತ್ರಿಗಳೂ, ಪುರಜನರೂ ಎಲ್ಲರೂ ಸೇರಿದರು. ಮಹಾರಾಜರು ಬಂದು ಸಿಂಹಾಸನವನ್ನು ಲಂಕರಿಸಿದ ಕೂಡಲೇ ಜಯಜಯಕಾರ ವಾಯಿತು. ವಂದಿಮಾಗಧರು ಹೊಗಳಿದರು. ಭಟ್ಟಂಗಿಗಳು ಪರಾಕು ಹೇಳಿದರು. ನಜರಾಣಿ ಒಪ್ಪಿಸಿದರು. ಕುಲಪುರೋಹಿತರು ಮಂತ್ರಿಗಳಿಂದ ಆಶೀರ್ವದಿಸಿದರು. ಗಂಭೀರನಾದ ಅರಸನು ಎಷ್ಟೂ ವಿಕಸಿತನಾಗಲಿಲ್ಲ. ಇದು ಬಹಳೇ ಒಳ್ಳೆಯದೆಂದು ಅಲ್ಲೇ ಕುಳಿತ ಚಂದ್ರಶೇಖರನು ನೆನೆಯುತ್ತಿದ್ದನು.

ಆಮೇಲೆ ರೂಪವತಿಯ ನೃತ್ಯ-ಗಾಯನದ ಕಾರ್ಯಕ್ರಮವು ಸಾರಲ್ಪಟ್ಟಿತು. ಸಕಲಾಲಂಕಾರ ಭೂಷಿತಳಾಗಿ ಅಂದು ರೂಪವತಿಯು ರಾಜನೆದುರು ಬಂದು ಮಾಡಿದ ನೃತ್ಯಕ್ಕೆ ಗಂಧರ್ವ ಕನೈಯರೂ ಸಹ ತಲೆದೂಗಿಸಬೇಕು. ಅವಳು ತೋರಿದ ನೃತ್ಯವನ್ನು ಸ್ವತಃ ಶಿವ-ಪಾರ್ವತಿಯರೇ ಕಲಿಸಿರಬಹುದೇ ಎಂದು ಸಭಿಕರು ಬೆರಳು ಕಚ್ಚಿದರು. ಮಹಾರಾಜನು ಸಂತೋಷಭರಿನಾದನು. ಆನಂದದ ಭರದಲ್ಲಿ ತನ್ನ ಶೋಕವನ್ನು ಮರೆತನು. “ಬಾ ರೂಪವತಿ, ನಿನ್ನ ಈ ದಿನದ ಗಾನ ನೃತ್ಯಗಳಿಗೆ ಮನಸೋತಿದ್ದೇನೆ. ಏನು ಬೇಕು ಬೇಡು. ಮೊದಲು ನನ್ನ ಕೊರಳೊಳಗಿನ ಅಮೂಲ್ಯ ರತ್ನ ಹಾರವನ್ನು ತೆಗೆದುಕೊ.”

“ಮಹಾರಾಜ ನನಗೆ ಹಾರವು ಬೇಡ, ನನ್ನದೊಂದು ಇಚ್ಛೆ ಇದೆ. ಅದನ್ನು ತಾವು ಕೇಳಬೇಕು.”

“?”

“ಪರದೇಶದಿಂದ ತಮ್ಮ ರಾಜ್ಯದಲ್ಲಿ ಬೀರಬಲ್ಲನೆಂಬವನೊಬ್ಬನು ಬಂದಿದ್ದಾನೆ.”

“ನಿಜ ಆ ಕೊಲೆಗಡುಕ… ನೀಚ…. ಅವನ ಮಾತನ್ನೇಕೆ ಎತ್ತಿದೆ?”

“ಅದನ್ನೇ ತಮಗೆ ಅರಿಕೆ ಮಾಡಿಕೊಳ್ಳಲು ಬಂದಿದ್ದೇನೆ. ಅವನ ಮೇಲೆ ರಾಜಕುಮಾರನ ಕೊಲೆಯ ಆರೋಪವಿದೆ. ಯಾವ ರಾಜಕುಮಾರನನ್ನು ಕೊಲೆ ಮಾಡಿದ್ದಾನೆ ಹೇಳಿರಿ. ಎಲ್ಲ ರಾಜಕುಮಾರರೂ ಕ್ಷೇಮದಿಂದಿರುವರು. ಬೇಕಾದರೆ ಈ ಬಗ್ಗೆ ಶೋಧವಾಗಲಿ.'”

“ಏನು? ಎಲ್ಲ ರಾಜಕುಮಾರರು ಕ್ಷೇಮದಿಂದಿರುವರೇ? ಲಾಲಸಿಗ ಹೋಗು ರಾಣಿ ಮಹಲಿನಿಂದ ವರ್ತಮಾನ ತೆಗೆದುಕೊಂಡು ಬಾ.”

ಲಾಲಸಿಂಗನೆಂಬ ಒಬ್ಬ ಸರದಾರನು ರಾಣಿ ಮಹಲುಗಳ ಕಡೆಗೆ ಸಾಗಿದನು. ಮತ್ತೆ ರೂಪವತಿಯು ಹೇಳತೊಡಗಿದಳು. “ನಿಜವಾದ ಸಂಗತಿಯೆಂದರೆ ಒಂದು ದಿನ ಬೀರಬಲ್ಲನು ಪೇಟೆಯಲ್ಲಿ ಕಲ್ಲಂಗಡಿ ಹಣ್ಣನ್ನು ಕೊಂಡುಕೊಂಡು ಅದಕ್ಕೆ ಬಿಳೇ ಬಟ್ಟೆ ಸುತ್ತಿ ತರುತ್ತಿರುವುದನ್ನು ನೋಡಿ ಯಾರೋ ದುಷ್ಕರು ರಾಜಕುಮಾರನನ್ನು ಕೊಂದಿದ್ದಾನೆಂದು ಸುದ್ದಿ ಹಬ್ಬಿಸಿರುವರು.”

“ಛೇ ಇದೆಂಥ ಮಾತು ಸುದ್ದಿ ಹಬ್ಬಿಸಿರಬಹುದು. ಆದರೆ ಸುದ್ದಿಯನ್ನು ನಂಬುವಷ್ಟು ಅವಿಚಾರಿಗಳಾಗಿದ್ದಾರೆಯೇ ನನ್ನ ಮಂತ್ರಿಗಳು ಮತ್ತು ಪೊಲೀಸ ಅಧಿಕಾರಿಗಳು?”

“ಅವರು ಅವಿಚಾರಿಗಳೋ ಸುವಿಚಾರಿಗಳೇ ನಾನರಿಯೆ. ಮಹಾರಾಜಾ ಆದರೆ ಆದ ಸಂಗತಿ ಇಷ್ಟು, ಇದು ನಿಜ. ತಮಾಷೆಗಾಗಿ ಹೀಗಾದದ್ದು ಗಂಭೀರ ಸ್ವರೂಪಕ್ಕಿಟ್ಟಿದೆ.”

“ಏನು ಸೋಮಶೇಖರ, ಏನು ಮಂತ್ರಿಗಳೇ ಏನನ್ನುವಿರಿ? ಅಥವ ಲಾಲಸಿಂಗನು ಬರಲಿ, ಆಮೇಲೆ ನ್ಯಾಯ ನಿರ್ಣಯವಾಗಲಿ, ಆ ಬೀರಬಲ್ಲನನ್ನು ಇಲ್ಲಿಗೆ ಕರೆದುಕೊಂಡು ಬನ್ನಿರಿ.”

ತುಸು ಹೊತ್ತಿನ ಮೇಲೆ ಲಾಲಸಿಂಗನು ಬಂದನು. ರಾಣಿ ಮಹಲಿನಲ್ಲಿ ಎಲ್ಲ ಕುಮಾರರೂ ಕ್ಷೇಮದಿಂದಿರುವರೆಂದೂ ಸಕಲ ರಾಣಿಯರು ನುಡಿದರೆಂದೂ, ಯಾರಿಗೂ ಏನೂ ಆಗಿಲ್ಲವೆಂದೂ ಲಾಲಸಿಂಗನು ಸಭೆಯಲ್ಲಿ ಉದ್ಗಾರ ತೆಗೆದನು. ಕೈ-ಕಾಲುಗಳಿಗೆ ಬೇಡಿಗಳನ್ನು ತೊಡಿಸಿದ ಬೀರಬಲ್ಲನನ್ನು ಇದೇ ಸಮಯಕ್ಕೆ ಸಭಾಸ್ಥಾನಕ್ಕೆ ತಂದು ಮಹಾರಾಜನ ಮುಂದೆ ನಿಲ್ಲಿಸಿದರು. ಗಂಭೀರವಾಗಿ ನಿಂತು ಬೀರಬಲ್ಲನು ಒಮ್ಮೆ ರಾಜನಿಗೆ ವಂದನೆಯನ್ನರ್ಪಿಸಿ ಸುತ್ತಲೂ ಎಲ್ಲ ಸಭಿಕರನ್ನೂ ನೋಡಿದನು. ಚಂದ್ರಶೇಖರ, ದಯಾರಾಮ, ಮಥುರಾದಾಸ ಇದ್ದರಲ್ಲದೇ ಬೀರಬಲ್ಲನ ಧರ್ಮಪತ್ನಿಯಾದ ರಮಾ ಕೂಡ ಮಾನವದವಳಾಗಿ ಕುಳಿತಿದ್ದಳು. ಆಗ ಸ್ವತಃ ರಾಜನೇ ಕೇಳಿದನು-“ಏನಪ್ಪ ನಿನಗೆ ಈ ಸ್ಥಿತಿ ಏಕೆ ಬಂದಿದೆ ಗೊತ್ತಿದೆಯೇ?”

“ನಾನರಿಯೇ ಮಹಾಪ್ರಭೋ, ನಿನ್ನೆ ಚಂದ್ರಶೇಖರನು ನನ್ನನ್ನು ಹುಡುಕುತ್ತ ಬಂದು ನನ್ನ ಕೈ-ಕಾಲುಗಳಿಗೆ ಬೇಡಿ ಹಾಕಿ ಸೆರೆಮನೆಗೆ ಕರೆದೊಯ್ದನು. ಇದರ ಹೊರ್ತು ನಾನೇನೂ ಅರಿಯೆ. ಯಾವ ತಪ್ಪಿಗಾಗಿ ಈ ಗತಿ ಪ್ರಾಪ್ತವಾಗಿದೆಯೋ ನನಗೆ ತಿಳಿಯದಾಗಿದೆ.”

“ನೀನು ರಾಜಕುಮಾರನ ಕೊಲೆ ಮಾಡಿದೆಯೆಂದು ನಿನ್ನ ಮೇಲೆ ಆರೋಪವನ್ನಿಡಲಾಗಿದೆ….”

“ಛೇ ಛೇ ಮಹಾರಾಜ, ನಾನು ನಿಪರಾಧಿ ನಾನು ಯಾರ ಕೊಲೆಯನ್ನೂ ಮಾಡಿಲ್ಲ.”

“ಚಂದ್ರಶೇಖರ, ಈ ಬಗ್ಗೆ ನಿನ್ನ ಅಂಬೋಣವೇನು? ಇವನ ಅಪರಾಧದ ಬಗ್ಗೆ ಪುರಾವೆಗಳೇನು? ನನ್ನ ಮುಂದೆ ಈಗ ಇಡು.”

“ಮಹಾಪ್ರಭುಗಳೇ, ನಿಜವಾಗಿಯೂ ಇವನು ರಾಜಕುಮಾರನ ಕೊಲೆ ಮಾಡಿ ದ್ದಾನೆ. ಈ ವಿಷಯವು ನನ್ನ ಸೋದರ ಸೊಸೆಯೂ ಇವರ ಧರ ಪತ್ನಿಯೂ ಆದ ರಮೆಯು ಸ್ವತಃ ನನಗೆ ಹೇಳಿದಳು. ಸ್ವಾಮಿ ಭಕ್ತನಾದ ನಾನು ನನ್ನ ರಕ್ತ ಸಂಬಂಧಿಕರಾದರೇನು? ಅಪರಾಧಿಗೆ ಶಿಕ್ಷೆಯಾಗಬೇಕು ಎಂದು ತಮ್ಮ ಸಮಕ್ಷಯದಲ್ಲಿ ಬರುವಂತೆ ವ್ಯವಸ್ಥೆ ಮಾಡಿದ್ದೇನೆ. ಇರಲಿ ರಾಜಕುಮಾರನ ಕೊಲೆ ಮಾಡಿ ರುಂಡವನ್ನು ಎಲ್ಲಿಟ್ಟಿದ್ದಾನೆಂಬುದನ್ನು ಅವನನ್ನೇ ಕೇಳಿರಿ.”

“ಬೀರಬಲ್ಲ ಇದಕ್ಕೇನನ್ನುವಿ?”

“ಮಹಾರಾಜ ರುಂಡಗಿಂಡವೆಂಬುದನ್ನು ಅರಿಯೆ, ಮೊನ್ನೆ ನಾನು ಪೇಟೆಯಲ್ಲಿ ಕಲ್ಲಂಗಡಿ ಹಣ್ಣು ಕೊಂಡುಕೊಂಡು ಬಂದು ಅದಕ್ಕೊಂದು ಬಳಿ ಬಟ್ಟೆ ಸುತ್ತಿ ಕಟ್ಟಿಗೆಯ ಪೆಟ್ಟಿಗೆಯಲ್ಲಿಟ್ಟು ಬೀಗ ಜಡಿದದ್ದನ್ನು ನನ್ನ ಹೆಂಡತಿಯು ನೋಡಿದಳು. ಅವಳೇ ಇದು ರುಂಡವೆಂದು ತಿಳಿದು ಹಾಗೆ ತನ್ನ ಸೋದರ ಮಾವನಾದ ಚಂದ್ರಶೇಖರನಿಗೆ ಹೇಳಿರಬೇಕು.”

“ಮಹಾಸ್ವಾಮಿ, ಅದೇ ರುಂಡವಿರಬೇಕು. ರಮೆಯು ಮೊದಲು ರಾಜಕುಮಾರನ ಕೊಲೆಯ ಬಗ್ಗೆ ಮಾತಾಡಿ, ಕೊನೆಗೆ ಅದನ್ನು ಬಚ್ಚಿಡಲು ಹವಣಿಸಿದಳು. ನಿಜವಾಗಿಯೂ ಅದು ರಾಜಕುಮಾರನ ರುಂಡವಿರಬೇಕು. ಇಲ್ಲದಿದ್ದರೆ ಸಾಮಾನ್ಯ ಒಂದು ಕಲ್ಲಂಗಡಿ ಹಣ್ಣನ್ನು ಪೆಟ್ಟಿಗೆಯಲ್ಲಿಟ್ಟು ಯಾರಾದರೂ ಕೀಲಿ ಹಾಕುವರೇ?”

“ದಯಾಸಾಗರನೇ, ಈ ಚಂದ್ರಶೇಖರನ ಕುತಂತ್ರ ನೀಚತನಗಳಿಗೆ ಮಿತಿಯೇ ಇಲ್ಲ. ನನ್ನ ಮನೆಯಿಂದ ಆ ಪೆಟ್ಟಿಗೆ ತರಿಸಿ ಅದನ್ನು ತಮ್ಮ ಸಮಕ್ಷಮದಲ್ಲಿಯೇ ತೆರೆದು ನೋಡಿರಿ. ನನ್ನ ಮಾತಿಗೆ ಬೆಲೆ ಬಂದೀತು.”

ಬೀರಬಲ್ಲನ ಮನೆಗೆ ಹೋಗಿ ಪೆಟ್ಟಿಗೆ ಹೊತ್ತುತರಲು ಆಜ್ಞೆಯಾಯಿತು. ನಾಲ್ಕು ದೂತರು ಆ ಕಡೆಗೆ ಧಾವಿಸಿದರು. ಮೌನವದನಳಾಗಿ ಕುಳಿತ ರಮೆಯನ್ನು ದ್ದೇಶಿಸಿ ಮಹಾರಾಜರು ನುಡಿದರು, “ಏನಪ್ಪಾ ತಾಯಿ, ಈ ಬಗ್ಗೆ ನೀನೆನ್ನೆನ್ನುವಿ?”

“ಮಹಾರಾ, ಈ ಬಗ್ಗೆ ನನಗೇನೂ ತಿಳಿಯದು, ನನ್ನ ಮಾನವಿಗೆ ನಾನೇನೂ ಹೇಳಿಲ್ಲ. ಇವನೇ ಹುಟ್ಟಿಸಿ ಮಾಡಿದ ಕಥೆಯಾಗಿದೆ. ತನ್ನ ಗಂಡನಿಗೆ ಅಕಲ್ಯಾಣವಾಗಲೆಂದು ಯಾವ ಹೆಂಡತಿಯು ಬಯಸುತ್ತಾಳೆ? ಯಾವಳು ಹಾಗೆ ಮಾಡುತ್ತಾಳೆ?” ಎಂದು ಅಳಹತ್ತಿದಳು.

“ಒಳ್ಳೇದು ಚಂದ್ರಶೇಖರ, ಇವಳು ನಿನಗೆ ರಾಜಕುಮಾರನ ಕೊಲೆಯಾಗಿದೆಯೆಂದು ಹೇಳಿದ ಕೂಡಲೇ ಯಾವ ರಾಜಕುಮಾರನ ಕೊಲೆಯಾಗಿದೆ ಎಂಬುದನ್ನು ಶೋಧಿಸಿದಿಯೇನು?”

“ಇಲ್ಲ ದಯಾನಿಧೆ, ನನ್ನ ಸ್ವಂತ ಸೊಸೆಯು ಹೇಳುವಳೆಂದ ಬಳಿಕ ಅದು ಸತ್ಯವೆಂದು ನಂಬಿದೆನು.”

ಬೀರಬಲ್ಲನ ಮನೆಯಿಂದ ಕಟ್ಟಿಗೆಯ ಪೆಟ್ಟಿಗೆ ಬಂದಿತು. ಚಂದ್ರಶೇಖರನೇ ಆ ಪೆಟ್ಟಿಗೆಯ ಕೀಲಿಯನ್ನು ತೆಗೆಯಬೇಕೆಂದು ಮಹಾರಾಜನು ಆಜ್ಞೆ ಮಾಡಿದನು. ಚಂದ್ರಶೇಖರನು ಪೆಟ್ಟಿಗೆಯ ಬೀಗ ತೆಗೆದು ಅದರ ಬಾಗಿಲನ್ನು ತೆಗೆದನು. ಅಲ್ಲಿದ್ದ ಬಿಳಿಯ ಬಟ್ಟೆಯ ಗಂಟನ್ನು ಮೇಲಕ್ಕೆತ್ತಿದನು. ಅದೆಲ್ಲವೂ ರಕ್ತವರ್ಣ ವಿದ್ದಿತು. ಆದರೆ ಅದನ್ನು ಬಿಚ್ಚಲಾಗಿ ಕೇವಲ ಕಲ್ಲಂಗಡಿಯ ಹಣ್ಣಿನ ಹೋಳುಗಳೇ ಇದ್ದವು. ಯಾರ ರುಂಡವೂ ಇರಲಿಲ್ಲ. ವಿಕಸಿತನಾದ ಚಂದ್ರಶೇಖರನ ಮುಖವು ಬಾಡಿತು. ಹೌಹಾರಿ ನಿಂತು ಬಿಟ್ಟನು. ಮಂತ್ರಿಗಳು ಅನೇಕ ಪ್ರಶ್ನೆಗಳನ್ನು ಕೇಳಿದರು. ಯಾವುದಕ್ಕೂ ಉತ್ತರ ಕೊಡಲು ಅವನ ಬುದ್ದಿ ಸ್ವಾಧೀನಲ್ಲಿಯೇ ಉಳಿಯಲಿಲ್ಲ.

ಮಹಾರಾಜರು ಬಹಳ ಸಿಟ್ಟಿಗೆದ್ದರು. “ನೀಚ ಚಂದ್ರಶೇಖರನೇ, ಇದೇ ರೀತಿ ಎಷ್ಟು ಜನ ನಿರಪರಾಧಿಗಳನ್ನು ನೀನು ಶಿಕ್ಷೆಗೆ ಗುರಿಮಾಡಿ ಸೆರೆ ಮನೆಗೆ ಕಳಿಸಿರುವೆಯೋ ದೇವರೇ ಬಲ್ಲ. ಬಹಳ ದಕ್ಷತೆಯುಳ್ಳವನೆಂದು ನಿನ್ನನ್ನು ನಂಬಿ ಶಹರ ರಕ್ಷಣೆಯ ಹೊಣೆಗಾರಿಕೆಯನ್ನು ನಿನ್ನ ಕೈಯ್ಯಲ್ಲಿ ಇದೇ ಏನು ಕಾರಭಾರ? ಲಾಲಸಿಂಗ ಈಗಿನವರೆಗೆ ಸೆರೆಮನೆಯಲ್ಲಿರುವ…
ನಿನ್ನ ಯಜಮಾನನಾರು? ನೀನು ಇಲ್ಲಿಗೆ ಬಂದ ಕಾರಣವನ್ನು ಹೇಳಬಲ್ಲೆಯಾ?”

“ಮಹಾರಾಜ ನನ್ನ ಒಡೆಯ ದಿಲ್ಲಿ ಚಕ್ರಾಧಿಪತಿ ಅಕಬರ ಬಾದಶಹನು ನಾನು ಅವನ ಮಂತ್ರಿ ಬೀರಬಲ್ಲನು. ಒಂದು ದೊಡ್ಡ ರಾಜಕಾರಣಕ್ಕಾಗಿ ತಮ್ಮೆಡೆಗೆ ಕಳಿಸಿದ್ದಾರೆ.”

ಮಹಾರಾಜರು ಆಶ್ಚರ್ಯದಿಂದ ಎದ್ದು ಬಂದು ಬೀರಬಲ್ಲನನ್ನು ಸ್ವಾಗತಿಸಿ ತನ್ನ ಪಕ್ಕದಲ್ಲಿ ಸ್ಥಳ ಕೊಟ್ಟನು. ಆಸ್ಥಾನದ ಸಕಲವೂ ಎದ್ದು ಬಂದು ವಂದನೆಗಳನ್ನು ಅರ್ಪಿಸಿ ಪುನಃ ತಮ್ಮ ತಮ್ಮ ಸ್ಥಳಗಳಿಗೆ ಹೊರಟು ಹೋಗಿ ವಿರಾಜಿಸಿದರು.

“ಬೀರಬಲ್ಲ ನಿನ್ನನ್ನು ಗುರುತಿಸದೇ ನಾವು ನಿನಗೆ ಅವಮರ್ಯಾದೆ ಮಾಡಿದೆವು. ದಯವಿಟ್ಟು ಕ್ಷಮಿಸು. ಆ ರಾಜಕಾರಣವೇನು ಅರುಹು.”

“ತಾವು ಹಿಂದಕ್ಕೆ ನಾಲ್ಕು ಜನ ವಿರೋಧಾಭ್ಯಾಸ ಗುಣವುಳ್ಳವರು ತಮ್ಮ ಆಸ್ಥಾನಕ್ಕೆ ಬೇಕಾಗಿದ್ದಾರೆಂದೂ ಅವರನ್ನು ತಮ್ಮೆಡೆಗೆ ಕಳಿಸಬೇಕೆಂದೂ ಅಕಬರ ಬಾದಶಹನಿಗೆ ಕೇಳಿಕೊಂಡಿದ್ದಿರಲ್ಲದೇ?”

“ನಿಜ ಅವರನ್ನು ಕರೆದು ತಂದಿರುವಿಯೇನು?”

“ಅವರು ತಮ್ಮ ರಾಜ್ಯದಲ್ಲಿಯೇ ಇದ್ದಾರೆ. ನಮ್ಮಲ್ಲಿ ಮಾತ್ರ ಅಂಥವರು ಇಲ್ಲ

“ಏನು ನಮ್ಮಲ್ಲಿಯೇ ಇದ್ದಾರೆಯೇ?”

ಹೌದು ತೋರಿಸುವೆನು. ನೀವು ಬೇಡಿದ ಒಬ್ಬೊಬ್ಬರನ್ನೇ ಹೇಳಿದರೆ ತೋರಿಸುವೆನು.”

ಮಂತ್ರಿಯು ಎದ್ದು ದಿಲ್ಲಿಯ ಶಹರಕ್ಕೆ ಬರೆದ ಓಲೆಯ ಪ್ರತಿಯನ್ನು ಎತ್ತಿ ಹಿಡಿದು ಒಂದೊಂದೇ ಓದುತ್ತಾ ನಿಂತನು.

“ಕುಲೀನಳಾದ ಪತಿದ್ರೋಹಿ”

“ಇಗೋ ಇವಳು ಈ ರಮಾ ಇವಳು ಮಹಾ ಕುಲೀನಳು. ದೊಡ್ಡ ವಂಶದಲ್ಲಿ ಹುಟ್ಟಿದಳು. ವಿದ್ಯಾವಂತಳು ಇವಳ ಆಪ್ರೇಷ್ಟರೆಲ್ಲರೂ ಮಹಾರಾಕರಿಗೆ ಬೇಕಾದವರಿದ್ದು, ಆಸ್ಥಾನದಲ್ಲಿ ದೊಡ್ಡ ದೊಡ್ಡ ಅಧಿಕಾರದಲ್ಲಿದ್ದಾರೆ. ಇಂಥವಳಾದ ಇವಳು ತನ್ನ ಸ್ವಂತ ಪತಿಯಾದ ನನ್ನನ್ನು ಕೊಲೆಗೆ ಗುರಿ ಮಾಡಿದಳು. ಮಹಾರಾಜ ಒಂದು ಮಾತನ್ನು ಮಾತ್ರ ಬೇಡಿಕೊಳ್ಳುವೆನು, ದಯವಿಟ್ಟು ಅಭಯವಚನವನ್ನೀಯಬೇಕು.”

“ಬೀರಬಲ್ಲನೇ ನೀನು ಬೇಕಾದದ್ದು ನುಡಿ ನಿನಗೆ ನನ್ನ ಕ್ಷಮಾ ಛತ್ರವಿದೆ. ಅಂಜಬೇಡ ಹೇಳು, ಎಲ್ಲವನ್ನೂ ಹೇಳು.”

“ನಾನು ನನ್ನ ಹೆಂಡತಿಯ ರಮೆಯನ್ನು ಪರೀಕ್ಷಿಸುವದಕ್ಕೋಸ್ಕರ ನಾನು ಕಲ್ಲಂಗಡಿ ಹಣ್ಣಿನ ಹೋಳುಗಳನ್ನು ತಂದು ಬಿಳೇ ಬಟ್ಟೆಯನ್ನು ಕಟ್ಟಿ ‘ಇದು ರಾಜಕುಮಾರನ ರುಂಡ, ನಾನು ಕತ್ತರಿಸಿ ತಂದಿದ್ದೇನೆ. ಇದನ್ನು ಈ ಪೆಟ್ಟಿಗೆ ಯಲ್ಲಿಡುತ್ತೇನೆ. ಯಾರಿಗೂ ಇದನ್ನು ಹೇಳಬೇಡ’ ಎಂದು ನಾನು ನನ್ನ ರಮೆಗೆ ಹೇಳಿದ್ದು ನಿಜ. ಆದರೆ ಹೆಂಗಸರ ಬಾಯಿಯಲ್ಲಿ ಮಾತುಗಳು ನಿಲ್ಲುವವೇ? ಅವಳು ಕೂಡಲೇ ತನ್ನ ಆಪ್ತನಾದ ಚಂದ್ರಶೇಖರನಿಗೆ ಹೇಳಿಬಿಟ್ಟಳು. ಇದು ಪತಿದ್ರೋಹವಲ್ಲವೇ?”

ನಿಜ ಮುಂದೆ ಮಂತ್ರಿ ಎರಡನೆಯದಾವುದು?”

“ಕುಲೀನಳಾದ ಗುಣವತಿ.”

“ಇವಳು ಇಲ್ಲಿ ನಿಂತಿದ್ದಾಳೆ ನೋಡಿರಿ. ನಿಮ್ಮ ಆಸ್ಥಾನದ ನರ್ತಕಿ, ರೂಪವತಿ, ಅವಳ ಮನೆಗೆ ನಾನೊಮ್ಮೆ ಬರುವೆನೆಂದು ಮಾತು ಕೊಟ್ಟು ಬೇಗ ಹೋಗದೆ ತಡಮಾಡಿ ಅವಳ ನಿದ್ರೆಯ ಕಾಲದಲ್ಲಿ ಹೋದದ್ದು ನನ್ನ ತಪ್ಪು ಆದರೂ ಅವಳಿಗೆ ಬಾಯಿಗೆ ಬಂದಂತೆ ನಿಷ್ಟುರಮಾತುಗಳನ್ನಾಡಿದ ಅವಳನ್ನು ತಿರಸ್ಕರಿಸಿದೆನು. ಆದರೂ ನಾನು ಸಂಕಟದಲ್ಲಿದ್ದೇನೆಂದು ಕಂಡಕೂಡಲೇ ನನ್ನ ಮುಕ್ತತೆಗಾಗಿ ಅವಳು ಧಾವಿಸಿ ಬಂದಳು. ಅಂದಮೇಲೆ ಅವಳು ಗುಣವತಿಯಲ್ಲವೇ?”

“ಹೌದು ಯಾರಿರುವಿರಿ? ರೂಪವತಿಗೆ ಗೌರವ ಮಾಡಿ ಪಾರಿತೋಷಕ ಕೊಡಿರಿ. ಮಹಾಮಂತ್ರಿ ಮೂರನೆಯದು ಓದು.”

“ಮೂರನೆಯದನ್ನು ಗುಟ್ಟು ಬಲ್ಲ ವ್ಯಾಪಾರಿ.”

“ಮಹಾಸ್ವಾಮಿ ಇವನು ದಯಾರಾಮನೆಂಬ ನಿಮ್ಮ ಊರ ವ್ಯಾಪಾರಿಯು, ಪರದೇಶಿಯಾದರೇನಾಯಿತು. ನನ್ನಲ್ಲಿ ವಿಶ್ವಾಸವಿಟ್ಟು ನನಗೆ ಐವತ್ತು ಸಾವಿರ ಮೊಹರನ್ನು ಕೊಟ್ಟನು. ಇಷ್ಟೇ ಅಲ್ಲದೆ ನಾನು ಆಪತ್ತಿನಲ್ಲಿ ಬಿದ್ದಾಗ ನನ್ನನ್ನು ಪಾರು ಮಾಡಲು ರೂಪವತಿಯಂತೆ ಇವನೂ ಮುಂದೆ ಬಂದನು. ಇಂಥವನ ದುಡ್ಡು ಎಂದೂ ಮುಳುಗುವುದಿಲ್ಲ. ಬಡ್ಡಿ ಸಹಿತ ತಿರುಗುವದು. ಆದರೆ ಅದೇ ಮಥುರಾದಾಸನನ್ನು ನೋಡಿರಿ. ಅವನು ಇಲ್ಲಿಯೇ ಕುಳಿತಿದ್ದಾನೆ. ಇವನು ಮಹಾ ನೀಚನು. ಯಾರ ಮೇಲೆಯೂ ವಿಶ್ವಾಸವಿಡುವುದಿಲ್ಲ. ಸಾಲವೆಂದು ವರ್ಷದ ಬಡ್ಡಿ ಮುಂಗಡ ಮುರಿದುಕೊಂಡೇ ಕೊಡುವನು. ದಯಾ ಮೊದಲಾದ .ಗುಣಗಳು ಇವನಲ್ಲಿ ಹುಡುಕಿದರೂ ಸಿಗಲಾರವು. ಇಂಥವರು ಹಾಳಾಗಿ ಹೋಗುವದರಲ್ಲಿ ಸಂಶಯವಿಲ್ಲ.

“ನಿಜ ಬೀರಬಲ್ಲ ನಿನ್ನ ಪಾಂಡಿತ್ಯಕ್ಕೆ ನಾವು ತಲೆದೂಗಿದೆವು. ಆದರೆ ಮುಂದಿನದನ್ನು ಓದಿರಿ ಮಹಾಮಂತ್ರಿಗಳೇ. “ನಾಲ್ಕನೆಯದು ಕಣ್ಣಿದ್ದ ಕುರುಡನು.”

“ಇದನ್ನು ನಾವೆಲ್ಲರೂ ಈಗ ಕಂಡಿದ್ದೇವೆ. ಮಹಾರಾಜರೂ ಕ್ಷಮಾಹಸ್ತ ನೀಡಿದ್ದರಿಂದ ನಾನು ಬಾಯಿ ಬಿಚ್ಚಿ ಮಾತನಾಡುತ್ತಲೇ ಆಪ್ತತ್ವ ಮೊದಲಾದ ಭಿಡೆ ಮುರವತ್ತಿಗೊಳಗಾಗಿ ತಮ್ಮವರೆಂಬುವವರನ್ನೇ ದೊಡ್ಡ ದೊಡ್ಡ ಹೊಣೆಗಾರಿಕೆಯ ಸ್ಥಳದಲ್ಲಿ ನಿಯಮಿಸಿಕೊಂಡರೆ ರಾಜ್ಯಾಡಳಿತ ಕೆಡುವದರಲ್ಲಿ ಸಂಶಯವಿಲ್ಲ. ಹಾಗೆ ಆದದ್ದು ಈಗ ಕಂಡು ಬಂದಿದೆ. ಈ ಚಂದ್ರಶೇಖರನು ತನ್ನ ಸ್ವಾರ್ಥ ಸಾಧನೆಗೆ ಅಧಿಕಾರ ಹೆಚ್ಚುವದೆಂಬ ಆಸೆಯಿಂದ ರಮೆಯು ಹೇಳಿದ ಮಾತು ನಿಜವೋ ಅಲ್ಲವೋ ಎಂಬುದನ್ನು ಶೋಧಿಸದೇ ನನ್ನನ್ನು ಕೊಲೆಗೆ ಗುರಿ ಮಾಡಿದನು. ಇವನು ಕಣ್ಣಿದ್ದೂ ಕುರುಡನು” ಬುದ್ದಿ ಇದ್ದೂ ಮದಾಂಧನು.

“ಒಪ್ಪಿಗೆ ಆದುದರಿಂದಲೇ ಅವನಿಗೆ ಶಿಕ್ಷೆಯನ್ನು ಸಹ ವಿಧಿಸಿದ್ದೇನೆ. ಆಗಲಿಲ್ಲವೇ?”

“ಸರಿ ಮಹಾರಾಜ ನನ್ನ ಕೆಲಸವು ಇಲ್ಲಿಗೆ ಮುಗಿಯಿತು. ನನ್ನ ಒಡೆಯನಿಗೆ ತಾವು ಬೇಡಿದ ನಾಲ್ಕು ಜನರನ್ನು ತಮಗೆ ಒಪ್ಪಿಸಿದ್ದೇನೆ. ಮುಟ್ಟಿದ ಬಗ್ಗೆ ಪತ್ರ ಬರೆದು ಕೊಡುವ ಕೃಪೆಯಾಗಬೇಕು. ಅದನ್ನು ಒಯ್ದು ನಮ್ಮ ಬಾದಶಹನಿಗೆ ತೋರಿಸಿ ನನ್ನ ಕಾರ್ಯದಿಂದ ನಾನು ನಿವೃತ್ತನಾಗುವೆನು.”

“ಬೀರಬಲ್ಲ ನಿನ್ನಂಥ ಅಸಾಮಾನ್ಯ ಪಂಡಿತನನ್ನು ಮಂತ್ರಿಯನ್ನಾಗಿ ಇಟ್ಟುಕೊಂಡ ನಿನ್ನ ಅಕಬರನೇ ಧನ್ಯನು. ನಿನ್ನ ಚಾತುರ್ಯಕ್ಕೆ ನಾವು ಮನಸೋತೆವು. ಆಗಲಿ ನಾವು ಕೇಳಿದ ಎಲ್ಲ ವಸ್ತುಗಳು ನಮಗೆ ಸಿಕ್ಕವೆಂದು ನಮ್ಮ ಮಂತ್ರಿಯು ನಿಮಗೆ ಪತ್ರ ಬರೆದು ಕೊಡುವನು.ಆದರೆ ಒಂದು ಮಾತು ಬೀರಬಲ್ಲ.’

“ಅದೇನು ಮಹಾರಾಜ ಅಪ್ಪಣೆಯಾಗಲಿ.’”

“ಈ ರಮೆಯು ಎಷ್ಟೆಂದರು ಹುಡುಗಿ, ಸ್ತ್ರೀಜನ್ಯ ಸ್ವಭಾವದ ಮೂಲಕ ಮತ್ತು ಚಂದ್ರಶೇಖರನು ತನ್ನ ಆಪ್ತನು. ಅವನಿಂದ ತನ್ನ ಗಂಡನಿಗೆ ಕಲ್ಯಾಣವೇ ಆದೀತೆಂಬ ಭರವಸೆಯಿಂದ ಗುಟ್ಟಿನ ಮಾತನ್ನು ಅವನಿಗೆ ಅರುಹಿದಳು. ಅದು ದರಿಂದ ಅವಳನ್ನು ಕ್ಷಮಿಸು, ಮತ್ತು ನಿನ್ನ ಸಂಗಡ ಅವಳನ್ನು ಕರೆದುಕೊಮಡು ಹೋಗು.?”

“ಆಗಲಿ ಮಹಾರಾಜ ಮಹದಾಜ್ಞೆ”

ಮಹಾರಾಜರು ಸಭಾಜನರಿಂದೊಡಗೂಡಿ ಬೀರಬಲ್ಲ ದಂಪತಿಗಳಿಗೆ ಮೊಗಲ ಸಾಮ್ರಾಜ್ಯಕ್ಕೆ ಸಲ್ಲಿಸುವ ಎಲ್ಲ ಮಾನ-ಮರ್ಯಾದೆಗಳನ್ನು ಕೊಟ್ಟರು. ಸರಕಾರದಿಂದ ಕಪ್ಪು-ಕಾಣಿಕೆಗಳನ್ನು ಸ್ವತಃ ಬೀರಬಲ್ಲನ ಹೆಸರಿನಿಂದ ಕೊಟ್ಟು ರಾಜ ವೈಭವದಿಂದೊಡಗೂಡಿ ಅವನನ್ನು ದಿಲ್ಲಿಗೆ ಕಳಿಸಿದರು.

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply