ಅಧ್ಯಾಯ – 4
ಯೂರೋಪ್ ಪ್ರವಾಸ ಪ್ರಾರಂಭ

ಟಿ.ವಿ. ಮತ್ತು ಪುಸ್ತಕಗಳ ಮೂಲಕ ಜಗತ್ತಿನ ಎಲ್ಲ ದೇಶಗಳ ಹಾಗೂ ಜನರ ಬಗ್ಗೆ ತಿಳಿದುಕೊಂಡಿದ್ದೆ. ಆದರೆ ಅವನ್ನು ಕಣ್ಣಾರೆ ಕಾಣುವ ಅವರ ಬದುಕಿನ ಪರಿಸರವನ್ನು ಅವಲೋಕಿಸುವ ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕೆಂಬ ಆಸಕ್ತಿ ಇತ್ತು. ಅದರಲ್ಲೂ ಹಾಲೆಂಡಿನ Tulip Gardens ಮತ್ತು ಸ್ವಿಡ್ಡರ್ ಲ್ಯಾಂಡಿನ snow ಗುಡ್ಡಗಳನ್ನು ಮತ್ತು ಪ್ಯಾರಿಸ್ಸಿನ ಐಫೆಲ್ ಟವರನ್ನು ಒಂದು ಸಲ ನೋಡಲೇಬೇಕು ಎಂದುಕೊಂಡಿದ್ದೆ. ನನ್ನಂತೆ ನಮ್ಮ ಯಜಮಾನರು ಸಹ ಆಶೆಪಟ್ಟಿದ್ದರು. ಟೂರ್‌ಗೆ ಯೂರೋಪ್‌ಗೆ ನಾವು ಈ ವರ್ಷ 2016 ಆಗಸ್ಟ್‌ನಲ್ಲಿ ಹೋಗೋಣ ಎಂದು ಹೋದ ವರ್ಷವೇ ಡಿಸೆಂಬರಿನಲ್ಲಿ ನಿಶ್ಚಯ ಮಾಡಿದ್ದೆವು. ಅದಕ್ಕಾಗಿ ಎಲ್ಲ ಪ್ಯಾಕೇಜ್ ಟೂರ್‌ಗಳ ಸಂಪರ್ಕ ಮಾಡಿ ಎಷ್ಟು ಹಣವಾಗುತ್ತದೆ ಎಂದು ವಿಚಾರಿಸಿದೆವು. ಇಂಡಿಯಾದಲ್ಲಿರುವ ಯಾವುದೇ ಪ್ಯಾಕೇಜ್ ಟೂರ್‌ನವರು ಎಲ್ಲ ಪ್ರವಾಸಿಗರಿಗೂ ಲಂಡನ್ 3 ದಿನ ಮತ್ತು ಸ್ಕಾಟ್‌ಲೆಂಡ್ 4 ದಿನ ನೋಡಲೇಬೇಕಿತ್ತು. ಆದರೆ ನಾವು ಈ ಮೊದಲೇ ಇಂಗ್ಲೆಂಡ್ ಮತ್ತು ಸ್ಕಾಟ್‌ಲೆಂಡ್ ನೋಡಿದ್ದರಿಂದ ಮತ್ತು Star Tour ನವರು ನಮ್ಮನ್ನು ಲಂಡನ್‌ನಿಂದ pick up ಮಾಡಿ ವಾಪಸ್ ಲಂಡನ್ನಿಗೆ ಬಿಡುವವರಿಂದ ಇದೇ Star Tour ಒಳ್ಳೆಯದೆಂದು ನಿಶ್ಚಯಿಸಿದೆವು. ಮಗಳು ಸಹ ಲಂಡನ್ನಿನಲ್ಲಿರುವುದರಿಂದ ಮೊಮ್ಮಗನ ಜೊತೆ ಸ್ವಲ್ಪ ದಿನ ಕಳೆಯಲು ಅನುಕೂಲವಾಗುತ್ತದೆ ಎಂದು ಸಂತೋಷವಾಯಿತು.
ಅದೇ ರೀತಿ ಆಗಸ್ಟ್ 1ರಿಂದ 15ರವರೆಗೆ ನಮ್ಮ ಪ್ರವಾಸವಿತ್ತು. ನಾವು ನೋಡುವ ಸ್ಥಳಗಳು ಈ ರೀತಿ ಇದ್ದವು. ಬೆಲ್ಲಿಯಂ. ಬೈಸೆಲ್ಸ್, ನೆದರ್‌ಲೆಂಡ್ (ಹಾಲೆಂಡ್). ಆಮ್‌ಸ್ಟರ್ ಡೆಮ್, ಜರ್ಮನಿ, ಲಿಚಿಸ್ಪಿನ್, ಸ್ವಿಡ್ಡರ್‌ಲೆಂಡ್, ಆಸ್ಟ್ರಿಯಾ, ಫ್ಲಾರೆನ್ಸ್, ರೋಮ್, ಇಟಲಿ, ವೆನಿಸ್, ವೆಟಿಕನ್ ಸಿಟಿ. ಜೀನವಾ, ಪ್ಯಾರೀಸ್ ಅದಕ್ಕಾಗಿ ನಾವು ಶಾಂಫ್ಟ್ ವೀಸಾ ಮತ್ತು ‘ಲಂಡನ್ನಿಗಾಗಿ’ ಲಂಡನ್ ವೀಸಾ ತೆಗೆದುಕೊಂಡೆವು. ಅದೇ ರೀತಿ 2016ರ ಜೂನ್ 28ಕ್ಕೆ ಲಂಡನ್ನಿಗೆ ಹೋಗಲು ಸೆಪ್ಟೆಂಬರ್‌ನಲ್ಲಿ ತಿರುಗಿ ಬರಲು ಟಿಕೆಟ್ ಮಾಡಿಸಿದೆವು. ಈ ಮಧ್ಯೆ ಮೇ ತಿಂಗಳಲ್ಲಿ ನನಗೆ Viral infection ಆಗಿ ಕಫ ಕೆಮ್ಮು ಶುರುವಾಯಿತು. 2 course ಆ್ಯಂಟಿ ಬ್ಯಾಾಟಿಕ್ ತೆಗೆದುಕೊಂಡರೂ ಕಡಿಮೆಯಾಗಲಿಲ್ಲ. ‘ENT’ ತಜ್ಞರಿಗೆ ಸಹ ತೋರಿಸಿಯಾಯಿತು. ಆದರೆ ಕೆಮ್ಮು controlಗೆ ಬಂದರೂ ಪೂರ್ತಿಯಾಗಿ ಕಡಿಮೆಯಾಗಲಿಲ್ಲ. ಜುಲೈ ತಿಂಗಳು ಬಂದರೂ ಆಗೊಮ್ಮೆ ಈಗೊಮ್ಮೆ ಕೆಮ್ಮು ಕಫ ಬಂದು ನಾನು ಇಲ್ಲಿಯೇ ಇದ್ದಿರುವೆನೆಂದು ಪದೇ ಪದೇ ನನ್ನನ್ನು ಎಚ್ಚರಿಸುತ್ತಿತ್ತು. ನಾನಂತೂ ಯುರೋಪ್ ಪ್ರವಾಸ ಹೋಗುವ ಆಸೆಯನ್ನು ಬಿಟ್ಟು ಬಿಟ್ಟಿದ್ದೆ. ಲಂಡನ್ನಿನ ಚಳಿ, ನೆದರ್‌ಲೆಂಡ್‌ನ ಮಳೆ ಸ್ವಿಜ್ಜರ್‌ಲೆಂಡಿನ ಹಿಮದಿಂದ ನನ್ನ ಕೆಮ್ಮು ಹೆಚ್ಚಾಗಬಹುದೆಂದು ತುಂಬಾ ಹೆದರಿದ್ದೆ. ಆದರೆ ನಮ್ಮ ಯಜಮಾನರು ಏನೂ ಆಗುವುದಿಲ್ಲ ನಾನಿದ್ದೇನೆ. ಎಲ್ಲ ಔಷಧ ಇಟ್ಟುಕೊಳ್ಳೋಣ ಮಾನಸಿಕವಾಗಿ ರೆಡಿಯಾಗು ಎಂದು ಹೇಳುತ್ತಾ ನಾವಿಬ್ಬರೂ ಮಾನಸಿಕವಾಗಿ ಮತ್ತು ದೈಹಿಕವಾಗಿ ತಯಾರಾದೆವು. ಮತ್ತು ಪ್ರವಾಸದಲ್ಲಿ ಅವಶ್ಯಕವೆನಿಸುವ ಬೆಚ್ಚಗಿನ ಬಟ್ಟೆಗಳು ಕೆಲವು ಔಷಧಿಗಳನ್ನು ಜೊತೆಯಲ್ಲಿಟ್ಟುಕೊಂಡೆವು. ಪ್ರವಾಸದಲ್ಲಿ ಬಾಯಾಡಿಸಲು ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಅವಲಕ್ಕಿಯನ್ನು ತಯಾರು ಮಾಡಿ ತುಂಬಿಟ್ಟುಕೊಂಡೆ.

ನಾವು ಈ ಸಲ Emiratus ವಿಮಾಣದಲ್ಲಿ ದುಬಾಯಿ ಮೇಲಿಂದ ಹೋಗುತ್ತಿರುವುದರಿಂದ ನಮಗೆ 30 kg ಚೆಕ್ ಇನ್ Bag ಮತ್ತು 8 kg ಕ್ಯಾಬಿನ್ ಬ್ಯಾಗು ಒಯ್ಯಬಹುದಿತ್ತು. ಮೇ ಮತ್ತು ಜೂನ್ ತಿಂಗಳಲ್ಲೇ ವೀಸಾ ಮತ್ತು ಟಿಕೇಟ್ ಮಾಡಿಸಿದ್ದರಿಂದ ಯಾವ ರೀತಿಯ ತೊಂದರೆಯೂ ಆಗಲಿಲ್ಲ.
ಜುಲೈ 28 ರಂದು ಬೆಳಿಗ್ಗೆ 7 ಗಂಟೆಗೆ ವಿಮಾನ ನಿಲ್ದಾಣ ತಲುಪಿದೆವು. ಚೆಕ್ ಇನ್ ಮಾಡುವಾಗ ತೂಕದಲ್ಲಿ 31 kg ತೋರಿಸಿತೆಂದು ಸೂಟ್‌ಕೇಸ್ ತೆಗಿಸಿ ಕೆಲವು ಸಾಮಾನನ್ನು ತೆಗೆದು ಬಿಸಾಡಿದರು. ಇದರಿಂದ ನನಗೆ ಬೇಸರವಾಯಿತು. ಈ ಸಲ ನಾನು ಲಂಡನ್ನಿಗೆ ಹೋಗುವುದು 5ನೇ ಸಲ ಒಮ್ಮೆಯೂ ನಮ್ಮ ಸೂಟ್‌ಸ್ ತೆಗೆಸಿರಲಿಲ್ಲ. ಕ್ಯಾಬಿನ್ Bag ತೂಕ ಸಹ ಮಾಡುತ್ತಿರಲಿಲ್ಲ. ಲಂಡನ್ನಿನವರು, ಅಮೇರಿಕಾದವರು ಸಹ ಒಮ್ಮೆಯೂ ನಮ್ಮ Bag ತೆಗೆಸಿರಲಿಲ್ಲ. ನಮ್ಮ ದೇಶದಲ್ಲಿ ಒಂದೆರಡು kg ಜಾಸ್ತಿಯಾದರೂ ಏನೂ ಅನ್ನದೆ ಪಾಸ್ ಎನ್ನುತ್ತಿದ್ದರು. ನಮ್ಮ ದೇಶದಲ್ಲಿ ಅದು ನಮ್ಮ ಬೆಂಗಳೂರಿನಲ್ಲಿ 1 kg ಹೆಚ್ಚಾಗಿದ್ದರೆ ನನ್ನ ಎಲ್ಲ Bagಗಳನ್ನು ಅಳತೆ ಮಾಡಿ ಸ್ವಲ್ಪ ತೂಕ ಹೆಚ್ಚು ಬಂದಿದ್ದಕ್ಕೆ ನನ್ನ ಮೊಮ್ಮಗನಿಗಾಗಿ ತೆಗೆದುಕೊಂಡ ಮಾವಿನ ಹಣ್ಣು, ಒಣಕೊಬ್ಬರಿ ತಿಂಡಿಗಳನ್ನು ತೆಗೆಸಿ ಬಿಸಾಕಿದರು. ಇದರಿಂದ ತಂಬಾ ಬೇಸರವಾಯಿತು. ಹೊರ ದೇಶಗಳಲ್ಲಿ ಸಹ imigration ನಲ್ಲಿ ಸಹ ಅವರು you visit so many times ಎಂದು ಹೆಚ್ಚು ಪ್ರಶ್ನೆ ಕೇಳದೇ ಯಾವ ಕಿರಿ ಕಿರಿಕಿರಿಯನ್ನು ಮಾಡದೇ ಕಳಿಸುತ್ತಾರೆ. ಅಂತೂ ಎಲ್ಲ ಕೆಲಸ ಮುಗಿಸಿ ವಿಮಾನಕ್ಕಾಗಿ ಕಾಯುತ್ತಾ ವಿಮಾನ ಹತ್ತುವ ಗೇಟ್ ಬಳಿ ಕುಳಿತೆವು. ಸುಮಾರು 10.30ಕ್ಕೆ ಎಮಿರೆಟ್ಸ್ ದುಬಾಯಿಗೆ ಹೋಗುವ ವಿಮಾನ ಬಂತು. ನಾವು ವಿಮಾನ ಏರಿ ಕುಳಿತೆವು. ಈ ವಿಮಾನದಲ್ಲಿ ಗಗನಸಖಿಯರು ಉಪಚಾರ ತುಂಬಾ ಚೆನ್ನಾಗಿತ್ತು. ಒಳ್ಳೆಯ ಬೆಳಗಿನ ತಿಂಡಿ, ಜ್ಯೂಸ್, ಕೇಕ್ ಮಧ್ಯಾಹ್ನದ ಊಟ ಎಲ್ಲ ಭಾರತದ್ದೇ ಆಗಿದ್ದರಿಂದ ತುಂಬಾ ಖುಷಿಯಾಯಿತು. Hot Drinks ಸಹ ಇತ್ತು. ಬಿಸಿ ಬಿಸಿ ಕಾಫಿ, ಟೀ ಸಹ ಇತ್ತು. ನಮ್ಮ ಸೀಟಿನ ಎದುರುಗಡೆ ಇರುವ ಚಿಕ್ಕ ಟಿವಿ ಪರದೆಯಲ್ಲಿ “ಕೆಂಡ ಸಂಪಿಗೆ” ಕನ್ನಡ ಸಿನಿಮಾ ನೋಡಿದೆ. ಇವರು ಉಪ್ಪಿ 2 ಸಿನಿಮಾ ನೋಡಿದರು. ಕುಡಿಯುವವರಿಗೆ Wine ಮುಂತಾದವಿದ್ದವು. ಜೊತೆ ಕಾಫಿ, ಟೀ, ತಂಪು ಪಾನೀಯಗಳಿಗೇನೂ ಕೊರತೆಯಿರಲಿಲ್ಲ. ಎಲ್ಲ ಮುಗಿಸಿ ಸುಧಾರಿಸಿಕೊಳ್ಳುವಷ್ಟರಲ್ಲಿ ದುಬಾಯಿ ಬಂದೇ ಬಿಟ್ಟಿತು.

ದುಬಾಯಿ ತುಂಬಾ ಶ್ರೀಮಂತ ರಾಷ್ಟ್ರ. ದೊಡ್ಡ ದೊಡ್ಡ ಕಟ್ಟಡಗಳ ಕಾಂಕ್ರಿಟ್ ಕಾಡು. ಮೇಲೆ ನೋಡಿದರೆ ಶುಭ್ರವಾದ ಆಕಾಶ, ಎಲ್ಲಿ ನೋಡಿದರೂ ಹತ್ತಿಯ ರಾಶಿ ಹಾಕಿದಂತೆ ಬೆಳ್ಳಗಿನ ಮೋಡದ ರಾಶಿ. ಕೆಳಗೆ ನೋಡಿದರೆ ಒಂದು ಕಡೆ ಸಮುದ್ರ ಮತ್ತೆ ನೋಡಿದ ಕಡೆ ಎಲ್ಲ ಮರುಭೂಮಿ, ಪೆಟ್ರೋಲ್ ಬಾವಿಗಳು, ಸುಂದರವಾದ ಸಿಮೆಂಟ್ ರಸ್ತೆಗಳು, ಸಾಲು ಸಾಲಾಗಿ ಇರುವೆಯಂತೆ ಹರಿದಾಡುವ ಕಾರುಗಳ ಸಾಲುಗಳು. ಇವುಗಳನ್ನು ನೋಡಿ ಖುಷಿಯಾದರೆ, ಅಲ್ಲಿಯ ಉರಿ ಬಿಸಿಲು ಮಳೆಯ ವಾಸನೆಯನ್ನೇ ಕಾಣದ ಬಿಳಿಯಾದ ಮೋಡಗಳನ್ನು ಕಂಡು ಬೇಸರವಾಯಿತು.
ನಮ್ಮನ್ನು ಹೊತ್ತ ವಿಮಾನ ದುಬಾಯಿ ವಿಮಾನ ನಿಲ್ದಾಣದಲ್ಲಿ ಇಳಿಯಿತು. ದುಬಾಯಿ ವಿಮಾನ ನಿಲ್ದಾಣ ತುಂಬಾ ವಿಶಾಲವಾಗಿತ್ತು. ಅಲ್ಲಿ ನಾವು ಎಲ್ಲ ಪರೀಕ್ಷೆಗಳನ್ನು ಮುಗಿಸಿ ಹೊರ ಬರುವುದಕ್ಕೆ ಸರಿಯಾಗಿ ಲಂಡನ್ನಿಗೆ ಹೋಗುವ ಅತೀ ದೊಡ್ಡ ವಿಮಾನ ತಯಾರಾಗಿ ನಿಂತಿತ್ತು. ನಾವು ಅದನ್ನು ಏರಿ ನಮ್ಮ ಸೀಟಿನಲ್ಲಿ ಆಸೀನರಾದೆವು. ನಮ್ಮ ಸೀಟಿನ ಎದುರುಗಡೆ ಇರುವ ಚಿಕ್ಕ ಟಿವಿ ಪರದೆಯಲ್ಲಿ ನಟ ಶರಣ್‌ನ ಅಧ್ಯಕ್ಷ ಸಿನಿಮಾ ಮತ್ತು ಅದರ ನಂತರ ಹಿಂದಿಯ ಅಕ್ಷಯ್ ಕುಮಾರ್‌ನ Houseful ಸಿನಿಮಾ ನೋಡಿದೆವು. ನಂತರ ಶರಣ್‌ನ ಬುಲೆಟ್ ಬಸ್ಯಾ ಸಿನಿಮಾ ನೋಡಿ ಆನಂದಿಸಿದೆವು. ಲಂಡನ್ನಿನ ಸಮಯ ಸಂಜೆ 6.30ಕ್ಕೆ ಲಂಡನ್ ವಿಮಾನ ನಿಲ್ದಾಣ ತಲುಪಿದೆವು. ನನಗಂತೂ ನನ್ನ ಮುದ್ದಿನ ಮೊಮ್ಮಗ ಜೀವ. ನನ್ನ ಕಾಣುವ ತವಕ ಎಂದು ಅವನನ್ನು ಕಂಡು ಅಪ್ಪಿ ಮುದ್ದಾಡುವೆನೋ ಅನಿಸಿಬಿಟ್ಟಿತು. ಮಗಳು ಅಳಿಯ ಹೊರಗೆ ಮೊಮ್ಮಗನ ಜೊತೆ ನಮಗಾಗಿ ಕಾಯುತ್ತಾ ಇದ್ದರು. ನಾವು ಇಮಿಗ್ರೇಶನ್ಮು ಗಿಸಿ ನಮ್ಮ ಚೆಕ್ ಇನ್ ಬ್ಯಾಗ್ ತೆಗೆದುಕೊಂಡು ಹೊರಗಡೆ ಬಂದೆವು. ಮಗಳು ನಮ್ಮನ್ನು ಕಂಡು ಮೊಮ್ಮಗನ ಜೊತೆ ನಮ್ಮ ಬಳಿಗೆ ಬಂದಳು. ನಾನು ಮುಂದಾಗಿ ಜೀವನನ್ನು ಎತ್ತಿ ಮುದ್ದಾಡಿದೆ. ಅಳಿಯ ಕಾರ್ ತರಲು ಹೋದನು. ಮೊಮ್ಮಗ
ತುಂಬಾ ದಿನದ ಮೇಲೆ ನಮ್ಮನ್ನು ನೋಡಿದ್ದರಿಂದ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಮನೆಗೆ ಬಂದ ಮೇಲೆ ಸಹ ನಮ್ಮನ್ನೇ ಕಣ್ಣು ಬಿಟ್ಟು ನೋಡುತ್ತಿದ್ದ. ನಮ್ಮನ್ನ ಹಿಂಬಾಲಿಸುತ್ತಿದ್ದ. ಮಗಳು ನಾನು ಮೊಮ್ಮಗನನ್ನು ಮುದ್ದು ಮಾಡುವುದನ್ನು ನೋಡಿ ಅಮ್ಮ ನಿನಗೆ ನನಗಿಂತ ಮೊಮ್ಮಗನ ಮೇಲೆ ಜಾಸ್ತಿ ಪ್ರೀತಿ ಎಂದಳು. ಅದಕ್ಕೆ ನಾನು ಯಾವಾಗಲೂ “ಅಸಲಿಗಿಂತ ಬಡ್ಡಿಯ ಮೇಲೆ ಪ್ರೀತಿ ಜಾಸ್ತಿ” ನಮ್ಮ ಮಕ್ಕಳು ಹುಟ್ಟಿದಾಗ ನಮಗೆ ಚಿಕ್ಕ ವಯಸ್ಸು. ಮದುವೆಯಾದ ವರ್ಷಕ್ಕೆ ಮಕ್ಕಳು ಹುಟ್ಟಬೇಕು ಇಲ್ಲದಿದ್ದರೆ, ಬಂಧು ಬಳಗದವರು ಕೇಳುವ ಪ್ರಶ್ನೆಗೆ ಉತ್ತರ ತಯಾರಾಗಿರಬೇಕಿತ್ತು. ಆಗ ಮಕ್ಕಳನ್ನು ಚೆನ್ನಾಗಿ ಉತ್ತಮ ರೀತಿಯಲ್ಲಿ ಬೆಳೆಸಬೇಕೆಂದು ಪ್ರತಿಯೊಂದು ತಂದೆ ತಾಯಿಗಳಿಗೆ ತುಂಬಾ ಆಶೆ ಇರುತ್ತದೆ. ಆದರೆ ಮಕ್ಕಳು ಹೇಳುವಂತೆ ನಮಗಿರುವ ಅನುಭವದ ಕೊರತೆ, ಹಣಕಾಸಿನ ತೊಂದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹೋರಾಟದ ಜೀವನದಲ್ಲಿ ಆಗ ಈಗಿನಂತೆ ಮೊಬೈಲ್, Internet, Facebook, Wattsap ಇವು ಇರಲಿಲ್ಲ. ಹೀಗಾಗಿ ಅವರನ್ನು ಬೆಳೆಸುವ ಅನುಭವದಲ್ಲಿ ಕೊರತೆಯಾಗಿರಬಹುದು. ಅವರು ಇಷ್ಟಪಟ್ಟಿದ್ದನ್ನು ಆಗಿನ ಕಾಲದ ಸಂಬಳದಲ್ಲಿ ಕೂಡಲೇ ಕೊಡಿಸಲು ಆಗದಿರಬಹುದು. ಆದರೆ ನಮ್ಮಿಬ್ಬರ ಆಶೆಯೂ ಮಕ್ಕಳನ್ನು ಒಳ್ಳೆಯ ವಿದ್ಯಾವಂತರನ್ನಾಗಿ ಮಾಡಬೇಕು ಎನ್ನುವುದೇ ನಮ್ಮ ಕನಸು. ಹಗಲಿರುಳು ಅದೇ ಚಿಂತೆ. ಅದರ ಜೊತೆ ಟಿ.ವಿ, ಪ್ರಿಜ್ಜು, ಸ್ಕೂಟರ್, ಮನೆ, ಇವನ್ನೆಲ್ಲ ಕಂತಿನಲ್ಲಿ ಕೊಂಡು ಅದರ ಹಣ ತಿಂಗಳ ಕಂತಿನಲ್ಲಿ ತುಂಬಿ ಮುಗಿಸುವವರೆಗೆ ನಮ್ಮ ಅರ್ಧ ಜೀವನವೇ ಕಳೆದಿರುತ್ತಿತ್ತು. ಆದರೆ ಈಗಿನ ಮಕ್ಕಳಿಗೆ ಆ ಪರಿಸ್ಥಿತಿ ಇಲ್ಲ. ಕೈತುಂಬಾ ಸಂಬಳ, ಮುಂದಾಲೋಚನೆಯಿಂದ ಎಲ್ಲ ಅನುಕೂಲಗಳನ್ನು ಮಾಡಿಕೊಂಡು ಮದುವೆಯಾಗಿ ಸುಖ ಜೀವನ ಮಾಡಿ ಬೇಕೆನಿಸಿದಾಗ ಮಕ್ಕಳನ್ನು ಮಾಡಿಕೊಂಡು ಸುಖವಾಗಿದ್ದಾರೆ.
By-ಶಾಲಿನಿ ಗಾಂವಕರ್
ಮುಂದಿನ ಭಾಗ ಓದಿ…
